ಮುಂಬಯಿ: ಮೇ.23: ವಾಣಿಜ್ಯ ನಗರಿ ಬೃಹನ್ಮುಂಬಯಿಯಲ್ಲಿನ ದಕ್ಷ ಮತ್ತು ಶಿಸ್ತುಬದ್ಧ ಆಗ್ನಿಶಾಮಕದಳದ ಉನ್ನತಾಧಿಕಾರಿದ್ದು ಕಳೆದ ವಾರ ಕಲ್ಭಾದೇವಿ ಪ್ರದೇಶದ ಕಟ್ಟಡದಲ್ಲಿ ಸಂಭವಿಸಿದ್ದ ಭಾರೀ ಆಗ್ನಿದುರ್ಘಟನೆಯಲ್ಲಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡು ವಿಧಿವಶರಾದ ದಕ್ಷಿಣ ಕನ್ನಡ
ಜಿಲ್ಲೆಯ ಕಾರ್ಕಳ ನಿಟ್ಟೆ ದದ್ದೋಡಿ ಮೂಲದ, ಮುಂಬಯಿ ಆಗ್ನಿಶಾಮಕದಳ ಉಪ ಪ್ರಧಾನ ಅಧಿಕಾರಿ ಸುಧೀರ್ ಜಿ.ಅಮೀನ್ ಅವರಿಗೆ ಬಿಲ್ಲವರ ಅಸೋಸಿಯೇಶನ್ಮುಂಬಯಿ ಇದರ ವತಿಯಿಂದ ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಸಂತಾಪ ಸೂಚನಾ ಸಭೆ ಜರುಗಿಸಿ ಅಗಲಿದ ಮಹಾನ್ ಚೇತನಕ್ಕೆ ಭಾಷ್ಪಾಂಜಲಿ ಕೋರಲಾಯಿತು.ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಪದಾಧಿಕಾರಿಗಳುಮತ್ತು ಅಸೋಸಿಯೇಶನ್ನ ಸಂಚಾಲಕತ್ವದ ಭಾರತ್ ಬ್ಯಾಂಕ್ನ ನಿಕಟಪೂರ್ವ ಕಾಯರ್ಾಧ್ಯಕ್ಷ ವಿ.ಆರ್.ಕೋಟ್ಯಾನ್ ಹಾಗೂ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ಅವರನ್ನೊಳಗೊಂಡು ಅಗಲಿದ ಸುಧೀರ್ ಅಮೀನ್ ಭಾವಚಿತ್ರಕ್ಕೆ ಪುಷ್ಫಾಂಜಲಿಗೈದು ನುಡಿನಮನ ಸಲ್ಲಿಸಿದರು.
.ಕನಿಷ್ಠಾವಧಿಯಲ್ಲಿ ಗರಿಷ್ಠ ಸಾಧನೆಗೈದು ಹುತಾತ್ಮರಾದ ಸುಧೀರ್ ಅಮೀನ್.


- ಓರ್ವ ನಿಷ್ಠಾವಂತ ಅಧಿಕಾರಿಯಾಗಿದ್ದು ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿಗಳಿಂದಪುರಸ್ಕೃತಗೊಂಡಿರುವ ನಾಡಿನ ಸಮಸ್ತ ಜನತೆಯ ಪ್ರೀತಿಗೆ ಪಾತ್ರರಾಗುತ್ತಾ ಸದಾ ನಗುಮೊಗದೊಂದಿಗೆಸೇವಾನಿರತರಾಗಿ ಬಾಂದವ್ಯದ ಬೆಸುಗೆಯಲ್ಲಿ ಸೇವಾನಿರತ ಸುಧೀರ್ ಅವರು ಇತ್ತೀಚೆಗೆ ಸಂಭವಿಸಿದ ಆಗ್ನಿ ದುರಂತದಲ್ಲಿ ಸಹೋದ್ಯೋಗಿಗಳ ಜೀವವನ್ನುಳಿಸಲು ಪಣತೊಡುತ್ತಿದ್ದಂತೆಯೇ ವಿಧಿಯ ಲೀಲೆಯ ಮನ್ನಿಸಿ ಆಕಸ್ಮಿಕವಾಗಿ ಕಣ್ಮರೆಯಾಗಿ ಹುತಾತ್ಮರಾದ ಓರ್ವ ಬಿಲ್ಲವರೆಣಿಸಲು ಅಭಿಮಾನವೆಣಿಸಿತ್ತಿದೆ. ಸೂಕ್ಷ್ಮತೆಯ ದೃಷ್ಠಿಕೋನವುಳ್ಳ ನಿಷ್ಠುರತೆ, ಗಂಭೀರತಾ ಭಾವನೆಯೊಂದಿಗೆ ಸದಾ ಹಸನ್ಮುಖಿಯಾಗಿ ಪ್ರತಿಷ್ಠಿತ ವ್ಯಕ್ತಿತ್ವವನ್ನು ಮೈಗೂಡಿಸಿದ್ದ ಅವರ ಸೇವಾನಿಷ್ಠೆಯನ್ನು ಪರಿಗಣಿಸಿ ಈ ಹಿಂದೆ ಬಿಲ್ಲವರ ಅಸೋಸಿಯೇಶನ್ ಇದೇ ಸಭಾಗೃಹದಲ್ಲಿ ಸನ್ಮಾನಿಸಿರುವುದನ್ನು ಇದೇ ವೇಳೆ ನಿತ್ಯಾನಂದ ಡಿ.ಕೋಟ್ಯಾನ್ ಸ್ಮರಿಸಿದರು.ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಎಸ್.ಪೂಜಾರಿ, ಸಿ.ಟಿ.ಸಾಲ್ಯಾನ ಮತ್ತು ಭಾಸ್ಕರ್ ಎಂ.ಸಾಲ್ಯಾನ್, ಗೌ| ಪ್ರ| ಕಾರ್ಯದರ್ಶಿ ಡಾ| ಯು.ಧನಂಜಯ ಕುಮಾರ್, ಜೊತೆಕಾರ್ಯದರ್ಶಿ ಗಳಾದ ಶಂಕರ್ ಡಿ.ಪೂಜಾರಿ, ಧನಂಜಯ್ ಎಸ್.ಕೋಟ್ಯಾನ್, ಮಹೇಶ್ ಕಾರ್ಕಳ, ಜೊತೆ ಕೋಶಾಧಿಕಾರಿಗಳಾದ ಧರ್ಮಪಾಲ್ ಜಿ.ಅಂಚನ್, ಜಯಂತಿ ವಿ.ಉಳ್ಳಾಲ್ ಹಾಗೂ ಸೇವಾದಳದಮುಖ್ಯಸ್ಥ ಗಣೇಶ್ ಕೆ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಅಕಾಲಿಕವಾಗಿ ಸ್ವರ್ಗ ಸಾಗರದಲ್ಲಿ ಲೀನರಾದ ಸುಧೀರ್ ಅಮೀನ್ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಭಾಷ್ಪಾಂಜಲಿ ಕೋರಿದರು. ವಿ.ಆರ್ ಕೋಟ್ಯಾನ್ ಮಾತನಾಡಿ “ಸಾಮಾಜಿಕ ಕಳಕಳಿಯ ವಿಶಾಲ ಚಿಂತನೆಯ ವ್ಯಕ್ತಿತ್ವದ ಸುಧೀರ್ ಓರ್ವ ಧೀರ ವ್ಯಕ್ತಿತ್ವದವರು. ನನಗೇನೂ ಅವರ ಸಮೀಪ್ಯದ ಪರಿಚಿತ ಅಲ್ಲದವರಾಗಿದ್ದರೂ ಅವರ ಕಾರ್ಯವೈಖರಿಯನ್ನು ಅರಿತಿದ್ದೇನೆ. ಅವರು ಜೀವಂತವಿರುವಾಗ ಅವರ ಬಗ್ಗೆ ತಿಳಿದವರೇ ಕಡಿಮೆ ಆಗಿದ್ದರೂ ವಿಧಿವಶರಾದ ಬಳಿಕ ಬಹಳಷ್ಟು ತಿಳಿದವರಿದ್ದಾರೆ. ಕನಿಷ್ಠಾವಧಿಯ ಬದುಕು ಬಾಳಿನಲ್ಲೂ ಗರಿಷ್ಠ ಸಾಧನೆಗೈದು ಹುತಾತ್ಮರಾದ ಸುಧೀರ್ ನಿಷ್ಕಲಂಕ ಸೇವೆ ಅನನ್ಯವಾಗಿದ್ದು, ಜನಪರ ಕಾಳಜಿವುಳ್ಳ ಅವರು ಬೃಹನ್ಮುಂಬಯಿಯಲ್ಲಿನ ಎಲ್ಲಾ ಸಮುದಾಯ, ಭಾಷಿಗರು, ಉದ್ಯಮಿಗಳಿಗೆ ಅತ್ಮೀಯರಾಗಿದ್ದು, ಸಮೀಪ್ಯದ ಸಂಬಧ ಬೆಳೆಸಿಕೊಂಡು ಬದುಕಿದ್ದ ಅಪ್ರತಿಮ ದಕ್ಷ ಅಧಿಕಾರಿ ಆಗಿದ್ದರು”ಎಂದರು. ಹಿತೈಷಿಗಳಾದ ಜಿ.ಎಂ. ಕೋಟ್ಯಾನ್, ಹರೀಶ್ ಎಂ.ಕುಮಾರ್, ಚಂದ್ರಶೇಖರ ಬೆಳ್ಚಡ, ವಿ. ಆರ್
- ಕೋಟ್ಯಾನ್,ಎಂ.ಬಿ ಕುಕ್ಯಾನ್, ರಂಜನ್ ಕುಮಾರ್, ಜಯಂತಿ ವಿ.ಉಳ್ಳಾಲ್, ಜಿ.ಟಿ ಆಚಾರ್ಯ, ಭಾಸ್ಕರ್
ಎಂ.ಸಾಲ್ಯಾನ್, ಶಂಕರ್ ಕೆ.ಸುವರ್ಣ, ದಾಮೋದರ ಕುಂದರ್, ಮಿತ್ರರಾದ ಸುನೀಲ್ ಬೆನಾರ್ಜರ್ ,
ಪ್ರಭಾಕರ್ ಗಾವ್ಡೆ, ಶಿವರಾಮ ಎಸ್.ಕೋಟ್ಯಾನ್ ಕಲೀನಾ ಮುಂತಾದವರು ಸಂದರ್ಭೋಚಿತವಾಗಿ ಮಾತ ನಾಡಿ ಅಗಲಿದ ಚೇತನಕ್ಕೆ ನುಡಿ ನಮನಗಳನ್ನು ಸಲ್ಲಿಸಿದರು. ಸಭೆಯಲ್ಲಿ ಸುಧೀರ್ ಅವರ ಮಾವ ಧನಂಜಯ ಅಳ್ಕೆ, ಪರಿವಾರದ ಶಶಿಧರ್ ಅಳ್ಕೆ, ದಿನೇಶ್ ಕರ್ಕೇರ,
ಸುರೇಶ್ ಬಂಗೇರಾ, ಭಾರತ್ ಬ್ಯಾಂಕ್ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ಕುಮಾರ್ ಆರ್.ಅವಿೂನ್ ಹಾಗೂ ಹಿತೈಷಿಗಳಾದ ರೋಹಿದಾಸ್ ಎಸ್.ಬಂಗೇರಾ,
ಕೆ.ಪಿ ಅರವಿಂದ , ತಿಮ್ಮಪ್ಪ ಬಂಗೇರ, ಸುಧಾಕರ್ ಉಚ್ಚಿಲ್, ಶ್ರೀಧರ್ ಎಸ್.ಸುವರ್ಣ, ರಾಜಾ ವಿ.ಸಾಲ್ಯಾನ್, ಗಣೇಶ್ ವಿ.ಸುವರ್ಣ, ಆನಂದ ಸಿ.ಕೋಟ್ಯಾನ್, ಸುರೇಶ್ ಶೆಟ್ಟಿ ಯೆಯ್ಯಾಡಿ, ದೆವೇಂದ್ರ ಬಂಗೇರ ಖಾರ್, ಸೇರಿದಂತೆ ಅನೇಕರು ಹಾಜರಿದ್ದು ಅಶ್ರುತಾರ್ಪಣೆ ಸಲ್ಲಿಸಿದರು. ಸುಧೀರ್ ಅಮೀನ್ ಅವರು ಮೇ.14ರಂದು ದಕ್ಷಿಣ ಮುಂಬಯಿ ಕಲ್ಬಾದೇವಿ ಪರಿಸರದ ಕಟ್ಟಡವೊಂದರಲ್ಲಿ ಸಂಭವಿಸಿದ ಮೇ.14ರಂದು ನವಿಮುಂಬಯಿ ಐರೋಲಿ ಅಲ್ಲಿನ ರಾಷ್ಟ್ರೀಯ ಆಗ್ನಿ ಶುಶ್ರೂಷೆ ಘಟಕದಲ್ಲಿ ಶ್ರೀಪರಮಾತ್ಮನ ಪಾದ ಸೇರಿ ಹರಿಯ ಚರಣದಲ್ಲಿ ಪವಡಿಸಿದ ಸುಧೀರ್ ಆತ್ಮಜ್ಯೋತಿಗೆ ಶ್ರೀ ದೇವರು ಚಿರಶಾಂತಿಯನ್ನು ದಯಪಾಲಿಸಲಿ ಎಂದು ನೆರೆದ ಸಭಿಕರು ಪ್ರಾರ್ಥಿ ಸಿದರು.ಘಟನೆಯ ಬಳಿಕ ಈ ವರೆಗೂ ಸುಧೀರ್ ಪರಿವಾರದೊಂದಿಗೆ ನಿಕಟ ಸಂಬಂಧವಿರಿಸಿ, ಸಾಂತ್ವನಗೈದು,ಇಂದೂ ಶ್ರದ್ಧಾಂಜಲಿ ಸಭೆ ಆಯೋಜಿಸಿ ಸಹಯೋಗವನ್ನೀಡಿದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ಪದಾಧಿಕಾರಿಗಳ ಸೇವೆಯನ್ನು ಸುಧೀರ್ ಕುಟುಂಬಸ್ಥರು ಮನವರಿಸಿ ಅಭಾರ ವ್ಯಕ್ತಪಡಿಸಿದರು.ಅಸೋಸಿಯೇಶನ್ನಗೌ| ಪ್ರ| ಕಾರ್ಯದರ್ಶಿ ಡಾ| ಯು.ಧನಂಜಯ ಕುಮಾರ್ ಸಭಾ ನಿರ್ವಹಿಸಿದರು. - ಚಿತ್ರ ವರದಿ: ರೋನ್ಸ್ ಬಂಟ್ವಾಳ್









