ಉಳ್ಳಾಲ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭೆ ವತಿಯಿಂದ “ಆಜ್ ಕಿ ಶಾಮ್ ಟಿಪ್ಪು ಸುಲ್ತಾನ್ ಕಿ ನಾಮ್” ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಟಿಪ್ಪು ಸುಲ್ತಾನ್‍ರವರ ಬಗ್ಗೆ ವಿಚಾರ ಸಂಕಿರಣ ಮತ್ತು ಅಭಿನಂದನಾ ಕಾಯಕ್ರಮ ಮೇ 22 ರಂದು (ನಾಳೆ) ಸಂಜೆ 7.15 ಗಂಟೆಗೆ ಉಳ್ಳಾಲ ನಗರ ಸಭೆಯ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಉಳ್ಳಾಲ ನಗರ ಸಭೆಯ ಅಧ್ಯಕ್ಷರಾದ ಮಹಮ್ಮದ್ ಯು.ಬಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
