ಉಳ್ಳಾಲ: ಕಾರು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸಹಸವಾರ ಕಲ್ಕಟ್ಟ ನಿವಾಸಿ ಮಹಮ್ಮದ್ ಶಫೀಕ್ (16) ಮೃತಪಟ್ಟಿರುವ ಘಟನೆ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಗುರುವಾರ ಸಂಭವಿಸಿದೆ.

IMG-20150521-WA0079
ಬೇಸಿಗೆ ರಜೆಯಲ್ಲಿ ದೇರಳಕಟ್ಟೆಯಲ್ಲಿರುವ ಮಾವನ ಇಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಫೀಕ್ ತನ್ನ ನೆರೆಮನೆಯವರಾದ ಅಬ್ದುಲ್ ರಝಾಕ್ ಎಂಬವರ ಆಕ್ಟಿವಾ ಸ್ಕೂಟರಿನಲ್ಲಿ ದೇರಳಕಟ್ಟೆ ಕಡೆಗೆ ಹೊರಟಿದ್ದ. ಈ ಸಂದರ್ಭ ದಾರಿಮಧ್ಯೆ ಸಿಕ್ಕ ಸಂಬಂಧಿಕರೋರ್ವರನ್ನು ಮಾತನಾಡಿಸಲೆಂದು ಅಬ್ದುಲ್ ರಝಾಕ್ ಅವರು ದೇರಳಕಟ್ಟೆ ಸಮೀಪ ಸ್ಕೂಟರ್ ನಿಲ್ಲಿಸುವ ಹಂತದಲ್ಲಿದ್ದಾಗ ಹಿಂಬದಿಯಿಂದ ಬಂದ ವೈದ್ಯೆಯೊಬ್ಬರ ಕಾರು ಡಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡ ಶಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಲ್ಕಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದ್ದ ಈತ ಮುಂದೆ ಪಿಯುಸಿ ಕಲಿಯುವವನಿದ್ದ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *