ಮುಂಬಯಿ, ಮೇ.21: ಗುರುವಾರ ಮುಂಜಾನೆ ದೈವಕ್ಯರಾದ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಹಾಗೂ ಬೃಹನ್ಮುಂಬಯಿ ಮಹಾಲಕ್ಷ್ಮೀ ಸಾತ್ ರಸ್ತಾ ಜಾಕೋಬ್ ಸರ್ಕಲ್ ನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ಮತ್ತು ಬಜ್ಪೆ-ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಶ್ರೀ ನಿರಂಜನ ಸ್ವಾಮೀಜಿ ಅವರ ಪಾರ್ಥೀವ ಶರೀರವನ್ನು ಇಂದಿಲ್ಲಿ ಸಂಜೆ ಸಾತ್ರಸ್ತಾ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು,
Niranjana Swamiji Darshana-4

Niranjana Swamiji Darshana-1

Niranjana Swamiji Darshana-2

Niranjana Swamiji Darshana-3
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಅಸೋಸಿಯೇಶನ್ನ ಉಪಾಧ್ಯಕ್ಷ ಸಿ.ಟಿ ಸಾಲ್ಯಾನ್, ಗೌ| ಪ್ರ| ಕಾರ್ಯದರ್ಶಿ ಡಾ| ಯು.ಧನಂಜಯ ಕುಮಾರ್, ಬಜಪೆ ದೊಡ್ಡಿಕಟ್ಟಾ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷರೂ ಆಡಳಿತ ಮೊಕ್ತೇಸರ ನಿಕಟಪೂರ್ವ ಅಧ್ಯಕ್ಷ ಎಲ್.ವಿ ಅವಿೂನ್ ,ಭಾರತ್ ಬ್ಯಾಂಕ್ ನಿರ್ದೇಶಕಿ ಪುಷ್ಪಲತಾ ಎಸ್.ಸಾಲ್ಯಾನ್, ವ್ಯವಸ್ಥಾಪಕ ನಿರ್ದೇಶಕ ಸಿ.ಆರ್.ಮೂಲ್ಕಿ, ನರ್ಸಪ್ಪ ಎಸ್. ಸಾಲ್ಯಾನ್, ಶ್ರೀ ಶಾಂತ ದುರ್ಗಾ ದೇವಿ ಮಂದಿರ ಗೋರೆಗಾಂ ಇದರ ಎಸ್.ಉದಯ ಸಾಲಿಯಾನ್, ಕೆ.ಟಿ ಕುಂದರ್ ಸೇರಿದಂತೆ ಸಾವಿರಾರು ಸಂಖ್ಯೆಯ ಗುರುಭಕ್ತರು, ಸ್ಥಾನೀಯ ಮುಖಂಡರು ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಬಳಿಕ ಪಾರ್ಥೀವ ಶರೀರವನ್ನು ಬ್ರೀಜ್ಕೇಂಡಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ಜೆಟ್ಏರ್ವೇಸ್ ವಿಮಾನ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ರವಾನಿಸಿ ಪೂರ್ವಾಹ್ನ ಬಜ್ಪೆ ಅಲ್ಲಿನ ಸುಂಕದಕಟ್ಟೆ ಶ್ರೀಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು. ಅಪರಾಹ್ನ ದೇವಸ್ಥಾನದ ಆವರಣದಲ್ಲಿ ಶ್ರೀಗಳನ್ನು ಸಮಾಧಿ ಮಾಡಲಾಗುವುದು ಎಂದು ಪರಿವಾರದ ನಾರಾಯಣ ನಿರಂಜನ್ ಮತ್ತು ಮಹೇಶ್ ನಿರಂಜನ್ ತಿಳಿಸಿದ್ದಾರೆ.

ಚಿತ್ರ ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *