ಬಂಟ್ವಾಳ: ಪುರಸಭಾ ನಿಧಿಯಿಂದ ಮಂಜೂರಾದ 7.50 ಲಕ್ಷ ವೆಚ್ಚದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ರಾಜೀವಪಳಿಕೆಯಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.


ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಉಪಾಧ್ಯಕ್ಷೆ ಯಾಸ್ಮಿನ್, ಪಿ.ರಾಮಕೃಷ್ಣ ಆಳ್ವ, ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಗುತ್ತಿಗೆದಾರ ಓಸ್ವಲ್ಡ್ ಗೋವಿಯಾಸ್, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಮೆಸ್ಕಾಂ ಇಂಜಿನಿಯರ್ ಸುಬ್ರಹ್ಮಣ್ಯ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
