ಬಂಟ್ವಾಳ: ಯಾರೋ ಮಾಡಿದ ಅದೇಶಕ್ಕೆ ಪೋಲಿಸರು ರಸ್ತೆಯಲ್ಲಿ ಸಾಯಬೇಕು, ದಿನ ಪೂರ್ತಿ ರೋಡ್‍ನಲ್ಲಿ ಕೆಲಸ ಮಾಡಬೇಕು, ಎಲ್ಲರ ಕಣ್ಣಿಗೆ ಕಾಣುವುದು ಪೋಲಿಸರು, ಟ್ರಾಫಿಕ್ ಸಮಸ್ಯೆ ತಪ್ಪುವುದಿಲ್ಲ ಹೀಗೆಂದು ಹೇಳುತ್ತಾ ಕೆಲಸ ಮಾಡುವುದು ಇಲ್ಲಿನ ಪೋಲಿಸ್ ಇಲಾಖೆ. ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಮರಳು ಸಾಗಾಟದ ಲಾರಿಗಳ ಸಂಚಾರಕ್ಕೆ ನಿಷೇಧ ಹೇರಿದ್ದರೂ, ಜಿಲ್ಲಾಡಳಿತದ ಆದೇಶ ಮೀರಿ ಸಂಚರಿಸುವ ಮರಳು ಲಾರಿಗಳ ವಿರುದ್ದ ಪೊಲೀಸ್ ಕಾರ್ಯಚರಣೆ ಮಂಗಳವಾರ ತಡ ರಾತ್ರಿ ಬಿ.ಸಿ.ರೋಡಿನಲ್ಲಿ ನಡೆಯಿತು. ಆದೇಶ ಉಲ್ಲಂಘಿಸಿ ಸಂಚರಿಸುತ್ತಿದ್ದ ಲಾರಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ನೇತೃತ್ವದ ತಂಡ ಬಿ.ಸಿ.ರೋಡು ಸರ್ಕಲ್ ಬಳಿಯಲ್ಲೇ ತಡೆಗಟ್ಟಿ, ಪುತ್ತೂರಿನತ್ತ ಕಳುಹಿಸುತ್ತಿದ್ದ ದೃಶ್ಯಗಳು ಕಂಡು ಬಂತು.
2015-05-12 21.04.12

2015-05-12 21.04.05

2015-05-12 21.03.18

2015-05-12 21.03.052015-05-12 20.55.54.

2015-05-12 21.06.17
ಕೆಲ ಲಾರಿಗಳು ಹೆದ್ದಾರಿ ಪಕ್ಕದಲ್ಲೇ ಲಾರಿಗಳನ್ನು ನಿಲ್ಲಿಸಿ ಪೊಲೀಸರ ಕಣ್ತಪ್ಪಿಸಿ ಧರ್ಮಸ್ಥಳ ರಸ್ತೆಯಲ್ಲೇ ಸಂಚರಿಸುವ ಯತ್ನ ನಡೆಸಿದ್ದು, ಪೊಲೀಸರು ಇದಕ್ಕೆ ಕಡಿವಾಣ ಹಾಕಿದರೂ ಕೆಲವು ಅದೇ ರಸ್ತೆಯಲ್ಲಿ ಸಂಚರಿಸಿದವು.

By Suddi9

Leave a Reply

Your email address will not be published. Required fields are marked *