ಬಂಟ್ವಾಳ: ಪುರಸಭೆಯ ಎಸ್‍ಎಫ್‍ಸಿ ಯೋಜನೆಯಡಿ ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅನುದಾನದಲ್ಲಿ ಬಂಟ್ವಾಳ ಪುರಸಭಾ ಬಿ.ಮೂಡ ಗ್ರಾಮದ 11ನೇ ವಾರ್ಡಿನ ಮೊಡಂಕಾಪು ಪಡೀಲ್ ಎಂಬಲ್ಲಿ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟೀಕರಣ ಮತ್ತು ಒಳಚರಂಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
Rasthe
ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಉಪಾಧ್ಯಕ್ಷೆ ಯಾಸ್ಮಿನ್, ಪಿ.ರಾಮಕೃಷ್ಣ ಆಳ್ವ, ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಗುತ್ತಿಗೆದಾರ ಓಸ್ವಲ್ಡ್ ಗೋವಿಯಾಸ್, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *