ಬಂಟ್ವಾಳ :ಬಂಟ್ವಾಳ ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆ ಎಂಬಲ್ಲಿ ಈಚೆಗೆ ತರಾತುರಿಯಲ್ಲಿ ಕೊರೆಸಿದ ಕೊಳವೆ ಬಾವಿ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯೆ ಚಂಚಲಾಕ್ಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
5btl-kolave
ಪುರಸಭೆಯ 20ನೇ ವಾರ್ಡ್ ಬಂಗ್ಲೆಗುಡ್ಡೆ ಎಂಬಲ್ಲಿ ತೆರೆದ ಬಾವಿ ಇದ್ದರೂ ತನ್ನ ಗಮನಕ್ಕೆ ಬಾರದಂತೆ ಇತ್ತೀಚೆಗೆ ಅನಾವಶ್ಯಕವಾಗಿ ಕೊಳವೆ ಬಾವಿ ಕೊರೆಯಲಾಗಿದ್ದು, ಗುತ್ತಿಗೆದಾರರಿಗೆ ಇದರ ಬಿಲ್ಲು ಪಾವತಿಸಬಾರದು ಎಂದು ಆಕ್ಷೇಪಿಸಿ ಮುಖ್ಯಾಧಿಕಾರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಪ್ರದೇಶದಲ್ಲಿ ಮಾಜಿ ಸದಸ್ಯರೊಬ್ಬರು ಪ್ರತೀ ಕಾಮಗಾರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಧ್ಯೆಪ್ರವೇಶಿಸಿ ಸರಿಪಡಿಸುವಂತೆಯೂ ಅವರು ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *