ಬಂಟ್ವಾಳ: ಬಂಟ್ವಾಳ  ತಾಲ್ಲೂಕಿನ ಪಾಣೆಮಂಗಳೂರು ಪೇಟೆ ಸಂಪರ್ಕಿಸುವ ಕಿರು ಸೇತುವೆಯನ್ನು ವಿಸ್ತರಿಸಿ ಹೊಸ ಸೇತುವೆ ನಿರ್ಮಿಸಬೇಕು ಎಂಬ ನಾಗರಿಕರ ಬಹುಕಾಲದ ಬೇಡಿಕೆಯಾಗಿರುವ ಇಲ್ಲಿನ ಸಾಲುಮರ ಸೇತುವೆ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ನಾಗರಿಕರಿಂದ ಆಗ್ರಹ ಕೇಳಿ ಬಂದಿದೆ.

5btl-setuve
ಕಳೆದ ಐದು ತಿಂಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ರೂ 1.26ಕೋಟಿ ವೆಚ್ಚದ ವಿಸ್ತøತ ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು, ಈಗಾಗಲೇ ಎರಡೂ ಬದಿ ಪಿಲ್ಲರ್ ಕಾಮಗಾರಿ (ಆಧಾರ ಸ್ಥಂಭ) ಮಾತ್ರ ನಡೆದಿದೆ. ಇದೇ ವೇಳೆ ಶಿಲಾನ್ಯಾಸಗೊಂಡ ಪಣೋಲಿಬೈಲು ಮತ್ತು ಸೋರ್ಣಾಡು ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೀಗ ಪಕ್ಕದಲ್ಲೇ ರೂ 5ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರ ನಡೆಸುತ್ತಿದ್ದು, ಪರಿಸರದಲ್ಲಿ ಧೂಳಿನ ಹಾರಾಟವೂ ಮಿತಿ ಮೀರಿದೆ. ಈಗಾಗಲೇ ಕೆಲವೊಮ್ಮೆ ಮಳೆ ಸುರಿಯುವ ಮುನ್ಸೂಚನೆ ಎದುರಾಗಿದ್ದು, ಭಾರೀ ಮಳೆಯಾದರೆ ತಾತ್ಕಾಲಿಕ ರಸ್ತೆ ಸಂಪರ್ಕವೂ ಸ್ಥಗಿತವಾಗುತ್ತದೆ ಎಂಬ ಭೀತಿ ಇಲ್ಲಿನ ಪ್ರಯಾಣಿಕರು ಮತ್ತು ವಾಹನ ಸವಾರರನ್ನು ಕಾಡತೊಡಗಿದೆ.
ಇದೀಗ ಸೇತುವೆಗೆ ಅಂತಿಮ ಹಂತದ ಸ್ಲ್ಯಾಬ್ ನಿರ್ಮಾಣ ಮತ್ತು ಎರಡೂ ಬದಿ ತಡೆಗೋಡೆಯೂ ಆಗಬೇಕಿದೆ. ಒಟ್ಟಿನಲ್ಲಿ ಮಳೆಗಾಲಕ್ಕೆ ಮುನ್ನ ಸೇತುವೆ ಪುನರ್ ನಿರ್ಮಾಣಗೊಂಡು ಸಂಚಾರಮುಕ್ತಗೊಳ್ಳಬೇಕು ಎಂಬ ಆಗ್ರಹ ಸ್ಥಳೀಯ ನಾಗರಿಕರಿಂದ ವ್ಯಕ್ತವಾಗಿದೆ.

By Suddi9

Leave a Reply

Your email address will not be published. Required fields are marked *