ಬಂಟ್ವಾಳ: ಈಗಾಗಲೇ ಬಂಟ್ವಾಳದಲ್ಲೊಂದು ನಿರೀಕ್ಷಣಾ ಮಂದಿರವಿದೆ. ಮಂಗಳೂರು ಹೆಂಚಿನ ಛಾವಣಿಯನ್ನು ಹೊಂದಿರುವ ತೀರಾ ಹಳೆಯದಾದ ಕಟ್ಟಡ ಇದಾಗಿದ್ದು ಇದೀಗ ಈ ಸ್ಥಳದಲ್ಲಿ ಹೊಸ ನಿರೀಕ್ಷಣಾ ಮಂದಿರ ನಿರ್ಮಿಸುವರೇ ಕ್ಷೇತ್ರದ ಶಾಶಕರು ಆಗಿರುವ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕೋರಿಕೆಯ ಮೇರೆಗೆ ರಾಜ್ಯದ ಲೋಕೋಪಯೋಗಿ ಇಲಾಖೆ 3ಕೋಟಿ ರೂಪಾಯಿ ಅನುದಾನ ಮಂಜೂರುಗೊಳಿಸಿ ಆದೇಶ ನೀಡಿದೆ.
ಇದರಂತೆ ಸುಸಜ್ಜಿತವಾದ, ಸವರ್ಾಂಗ ಸುಂದರವಾದ ಹಾಗೂ ಪೃಕೃತಿ ಸಹಜ ಸೊಬಗಿನಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳದ ನೂತನ ನಿರೀಕ್ಷಣಾ ಮಂದಿರಕ್ಕೆ ಏಪ್ರಿಲ್ 30ರಂದು ರಾಜ್ಯದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರಿಂದ ಶಿಲಾನ್ಯಾಸವೂ ದೊರೆತಿದ್ದು ಮುಂದಿನ 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯೂ ಸಚಿವಧ್ವಯರಿಂದ ದೊರೆತಿದೆ.

DSC_5765

ಈಗಾಗಲೇ ಇರುವ ನಿರೀಕ್ಷಣಾ ಮಂದಿರದ ಕೂಡು ರಸ್ತೆಯ ಬದಿಯಲ್ಲಿರುವ ಇಳಿಜಾರಿನ ನೆಲವನ್ನು ಉಪಯೋಗಿಸಿ ನಿರೀಕ್ಷಣಾ ಮಂದಿರವನ್ನು ನಿರ್ಮಿಸುವುದು, ಎತ್ತರದಿಂದ ನೇತ್ರಾವತಿ ನದಿ ತೀರದ ಪ್ರಾಕೃತಿಕ ಸೊಬಗನ್ನು ವೀಕ್ಷಿಸಲು ಅನುಕೂಲವಾಗುವಂತೆ ಹೊಸ ನಿರೀಕ್ಷಣಾ ಮಂದಿರದ ನೆಲ ಅಂತಸ್ತಿನ ಮಟ್ಟವನ್ನು ಈಗಿರುವ ಅಪ್ರೋಚ್ ರಸ್ತೆಗೆ ಹೊಂದಿಸಿ ಕಟ್ಟಡವನ್ನು ನಿರ್ಮಿಸಲು ಸಚಿವ ರೈ ಅವರು ಕೋರಿದ್ದು ಇದರಂತೆ ಪ್ರಸ್ತಾಪಿತ ಯೋಜನೆಯ 3 ಕೋಟಿ ರೂಪಾಯಿಗಳ ಅಂದಾಜುಪಟ್ಟಿಗೆ ಲೋಕೋಪಯೋಗಿ ಇಲಾಖೆ ಅನುದಾನ ಮಂಜೂರುಗೊಳಿಸಿ 2014-15ನೇ ಸಾಲಿನ ಅಪೆಂಡಿಕ್ಸ್-ಇ ನಲ್ಲಿ ಸೇರ್ಪಡೆಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ 3.61 ಎಕ್ರೆ ವಿಸ್ತೀರ್ಣದ ನಿವೇಶನದಲ್ಲಿ ಸರಕಾರಿ ಕಚೇರಿಗಳಾದ ಲೋಕೋಪಯೋಗಿ ಉಪವಿಭಾಗ ಕಟ್ಟಡ, ಪಂಚಾಯತು ರಾಜ್ ಇಂಜಿನಿಯರಿಂಗ್ ಕಟ್ಟಡ ಹಾಗೂ ಹಳೆಯ ನಿರೀಕ್ಷಣಾ ಮಂದಿರವಿದ್ದು ಹಳೆಯ ನಿರೀಕ್ಷಣಾ ಮಂದಿರದ ಎದುರು ನೇತ್ರಾವತಿ ನದಿ ಸಮೀಪವಿರುವ 0.50ಸೆನ್ಸ್ ಸ್ಥಳದಲ್ಲಿ ಹೊಸ ನಿರೀಕ್ಷಣಾ ಮಂದಿರ ನಿಮರ್ಿಸಲು ಉದ್ದೇಶಿಸಲಾಗಿದ್ದು ಇದರಂತೆ ನಿಸರ್ಗ ರಮಣಿಯ ಸುಂದರ ಪರಿಸರದಲ್ಲಿ ಪರಿಸರ ಸ್ನೇಹಿಯಾದ ನಿರೀಕ್ಷಣಾ ಮಂದಿರವೊಂದು ವರ್ಷದೊಳಗೆ ಕಂಗೊಳಿಸಲಿದೆ.
ನಿರೀಕ್ಷಣಾ ಮಂದಿರವು ಬೇಸ್ಮೆಂಟ್ ಮತ್ತು ನೆಲ ಅಂತಸ್ತನ್ನು ಒಳಗೊಳ್ಳಲಿದ್ದು ಒಟ್ಟು 1240.00 ಚ.ಮಿ.ವಿಸ್ತೀರ್ಣದ ಕಟ್ಟಡವಾಗಿದೆ. ಬೇಸ್ಮೆಂಟ್ನಲ್ಲಿ ವಾಹನಗಳ ಪಾರ್ಕಿಂಗ್, ಡೈನಿಂಗ್ ರೂಮು, ಅಡುಗೆ ಕೋಣೆ, ವಸತಿ ಕೋಣೆಗಳು ಮತ್ತು ಶೌಚಾಲಯಗಳ ಸೌಲಭ್ಯವಿರಲಿದೆ. ನೆಲ ಅಂತಸ್ತಿನಲ್ಲಿ 1 ವಿವಿಐಪಿ ಕೊಠಡಿ, 1 ವಿಐಪಿ ಕೊಠಡಿ, 2 ಸಾಮಾನ್ಯ ಕೊಠಡಿಗಳು, ಡೈನಿಂಗ್ ರೂಮು, ಮೀಟಿಂಗ ಹಾಲ್, ಲಾಂಜ್, ಡ್ರೆಸ್ಸಿಂಗ್ ರೂಮು, ವೈಟಿಂಗ್ ರೂಮುಗಳು ಮತ್ತು ಶೌಚಾಲಯಗಳ ವ್ಯವಸ್ಥೆಯೂ ಸೇರಿದ ಸುಂದರ ನಿರೀಕ್ಷಣಾ ಮಂದಿರ ವರ್ಷದೊಳಗೆ ಪೂರ್ಣಗೊಳ್ಳುವ ಭರವಸೆ ದೊರೆತಿದ್ದು ಉದ್ಘಾಟನಾ ಸಂಭ್ರಮದ ಸವಿಕ್ಷಣವೂ ಆದಷ್ಟು ಬೇಗ ಒದಗಿ ಬರಲೆಂಬುದು ಎಲ್ಲರ ಆಶಯವಾಗಿದೆ.

ಗೋಪಾಲ ಅಂಚನ್

By Suddi9

Leave a Reply

Your email address will not be published. Required fields are marked *