ಬಂಟ್ವಾಳ; ಅದು ಅಪರೂಪದ ಸನ್ನಿವೇಶ. ಇದು ಬಂಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮೂಲಕ ತೆರಳುವ ಮರಳು ತುಂಬಿದ ಲಾರಿಗಳನ್ನು ಶನಿವಾರ (ಇಂದು) ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಬಂಟ್ವಾಳ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ತಡೆಹಿಡಿಯಲಿದ್ದಾರೆಂದು ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆದ್ದಾರಿ ಮೂಲಕ ಅಕ್ರಮ ಮತ್ತು ಪರವಾನಿಗೆ ಹೊಂದಿರುವ ಮರಳು ಲಾರಿಗಳು ಅವ್ಯಾಹತವಾಗಿ ಸರತಿ ಸಾಲಿನಲ್ಲಿ ಸಂಚರಿಸುತ್ತಿರುವುದರಿಂದ ಬಿ.ಸಿ.ರೋಡಿನಲ್ಲಿ ಪ್ರತಿ ದಿನ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ. ಮೇ ತಿಂಗಳು ಪೂತರ್ಿ ಮದುವೆ ಇನ್ನಿತರ ಶುಭ ಸಮಾರಂಭಗಳು ನಿರಂತರವಾಗಿರುವುದರಿಂದ ವಾಹನಗಳ ದಟ್ಟಣೆಯು ಹೆಚ್ಚಾಗುತ್ತಿದೆ.
ಈ ನಡುವೆ ಅವ್ಯಾಹತ ಮರಳು ಸಾಗಾಟದಿಂದ ಟ್ರಾಫಿಕ್ ಜಾಮ್ ತಪ್ಪುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರು ತಾಸುಗಟ್ಟಲೆ ಸಿಕ್ಕಿಹಾಕಿಕೊಂಡು ನಿಗಧಿತ ಸಮಯಕ್ಕೆ ತಲುಪಲು ಸಾದ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆಯವರೆಗೆ ರಾ.ಹೆದ್ದಾರಿ ಬಿ.ಸಿ.ರೋಡಿನ ಮೂಲಕ ಸಂಚರಿಸುವ ಮರಳು ಸಾಗಾಟದ ಲಾರಿಗಳನ್ನು ನಿರ್ಬಂಧಿಸಬೇಕೆಂದು ಸಂಬಂಧ ಪಟ್ಟ ಇಲಾಖೆಯನ್ನು ಒತ್ತಾಯಿಸಿರುವ ಅವರು ಇಂದು ಬಿಜೆಪಿ ಕಾರ್ಯಕರ್ತರು ಬಿ.ಸಿ.ರೋಡಿನಲ್ಲಿ ಸಾಂಕೇತಿಕವಾಗಿ ಮರಳು ಲಾರಿಯನ್ನು ತಡೆ ಹಿಡಿಯಲಿದ್ದಾರೆ. ಸಂಬಂಧ ಪಟ್ಟ ಇಲಾಖೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪಕ್ಷದ ಕಾರ್ಯಕರ್ತರೆ ಈ ಕೆಲಸ ಮಾಡಲಿದ್ದಾರೆಂದು ಜಿ. ಆನಂದ ಎಚ್ಚರಿಸಿದ್ದಾರೆ. ಟ್ವಾಳದ ಉದ್ಯಮಿ ರಘುನಾಥ ಸೋಮಯಾಜಿಯವರ ಪುತ್ರ ಕೃಷ್ಣದೇವನ ಬ್ರಹ್ಮೋಪದೇಶದಲ್ಲಿ ಮನೆಮಂದಿ ಹೃದಯಶ್ರೀಮಂತಿಕೆ ಮೆರೆದ ಅಪೂರ್ವ ಕ್ಷಣ. ಬಂದ ಆಮಂತ್ರಿತರಿಗೆಲ್ಲಾ ಹೊಟ್ಟೆ ತುಂಬುವಷ್ಟು ಮೃಷ್ಟಾನ್ನ ಭೋಜನ ಏರ್ಪಾಡು ಮಾಡಿದ್ದ ಸೋಮಯಾಜಿ ಕುಟುಂಬ, ಊಟದಲ್ಲಿ ಒಂದಿಷ್ಟು ಭಕ್ಷ್ಯಗಳನ್ನು ಕಡಿಮೆ ಮಾಡಿ, ಅದರ ಮೊತ್ತ ಸುಮಾರು 1ಲಕ್ಷ ರೂ ಅನ್ನು ನೇಪಾಳದಲ್ಲಿ ಭೂಕಂಪದಿಂದ ಸಂತ್ರಸ್ತರಿಗೆಂದು ನೀಡಿದ್ದಾರೆ.
11
ಬ್ರಹ್ಮೋಪದೇಶಕ್ಕೆ ಆಗಮಿಸಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರಿಗೆ ಈ ಚೆಕ್ ಹಸ್ತಾಂತರಿಸಿದ ರಘುನಾಥ ಸೋಮಯಾಜಿಯವರು, ಹೃದಯ ಶ್ರೀಮಂತಿಕೆ ಮೆರೆದದ್ದು ನಿಜಕ್ಕೂ ಶ್ಲಾಘನಾರ್ಹ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಘುನಾಥ ಸೋಮಯಾಜಿಯವರು, ಮಗನ ಬ್ರಹ್ಮೋಪದೇಶ ದ ಸಿದ್ದತೆ ನಡೆಯುತ್ತಿದ್ದಾಗಲೇ, ನೇಪಾಳದಲ್ಲಿ ಭೂಕಂಪ ನಡೆದ ಸುದ್ದಿ ಕೇಳಿಬಂತು. ಇಂತಹಾ ಸಂದರ್ಭದಲ್ಲಿ ನಾವು ಇಲ್ಲಿ ಅದ್ದೂರಿ ಶುಭಕಾರ್ಯ ನಡೆಸುತ್ತಿದ್ದೇವೆ, ಅದರಲ್ಲಿ ಒಂದಷ್ಟು ಪಾಲು ನೇಪಾಳದ ಸಂತ್ರಸ್ತರಿಗೆ ಒದಗಿಸಬೇಕೆನ್ನುವ ಇರಾದೆಯಿಂದ ನಮ್ಮ ಕೈಲಾದ ಒಂದು ಲಕ್ಷ ರೂ ಅನ್ನು ಸಚಿವರ ಮೂಲಕ ಜಿಲ್ಲಾಡಳಿತಕ್ಕೆ ನೀಡಿದ್ದೇವೆ ಎಂದರು.
ಚೆಕ್ ಸ್ವೀಕರಿಸಿದ ಸಚಿವ ಬಿ.ರಮಾನಾಥ ರೈ ಯವರು, ಸೋಮಯಾಜಿ ಕುಟುಂಬದ ಈ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭೋಜನದಲ್ಲಿ ಸರಳತೆ ಕಾಯ್ದುಕೊಳ್ಳುವ ಮೂಲಕ, ಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ರಘುನಾಥ ಸೋಮಯಾಜಿಯವರು ಉತ್ತಮ ಕಾರ್ಯ ಮಾಡಿದ್ದಾರೆ. ಚೆಕ್ ಅನ್ನು ಜಿಲ್ಲಾಡಳಿತದ ಮೂಲಕ ನೇಪಾಳ ಸಂತ್ರಸ್ತರ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು ಎಂದರು.

By Suddi9

Leave a Reply

Your email address will not be published. Required fields are marked *