ಬಂಟ್ವಾಳ : ಹೊಸ ಹೊಸ ಯೋಜನೆಗಳನ್ನು ನಾವು ಸ್ವಾಗತಿಸಬೇಕು ಮತ್ತು ಇವುಗಳನ್ನು ಸ್ವಾಗತಿಸಿದರೆ ತುಂಬಾ ಉದ್ಯೋಗ ಸೃಷ್ಟಿಯಾಗುತ್ತದೆ. ಸಂಘಟಿತ ಕಾರ್ಮಿಕರಿಂದ ದೇ ಶ ಬಲಿಷ್ಟವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ ಚಂದ್ರಶೇಖರ ಯು. ನುಡಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಕಾರ್ಮಿಕ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ವಕೀಲರ ಸಂಘದ ಸಭಾ ಭವನದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
KAR_8648
ಕಾರ್ಮಿಕರಿಗೆ ಗೌರವ ಸಿಗಬೇಕು , ಕಾರ್ಮಿಕರ ಹಕ್ಕುಗಳೊಂದಿಗೆ ಕರ್ತವ್ಯವನ್ನು ಕೂಡ ತಿಳಿಸಬೇಕು. ವಿಧಾನ ಸೌಧ , ಕೃಷ್ಣರಾಜ ಸಾಗರ , ತಾಜ್ ಮಹಲ್ ಕಟ್ಟಿದ ಕಾರ್ಮಿಕರನ್ನು ಜನ ನೆನಸದೇ ಇರುವುದು ದುರಂತ ಎಂದು ಮುಖ್ಯ ಅತಿಥಿ ಪ್ರಧಾನ ಸಿವಿಲ್ ನ್ಯಾಯಾಧೀ ಶ ಹಾಗೂ ಜೆ.ಎಂ.ಎಫ್.ಸಿ ಜಯಪ್ರಕಾಶ್ ಡಿ.ಆರ್. ನುಡಿದರು .
ಸಂಪನ್ಮೂಲ ವ್ಯಕ್ತಿ ಕಾರ್ಮಿಕ ನಿರೀಕ್ಷಕ ಎಂ.ಪ್ರಸನ್ನ ಕುಮಾರ್ ಕಾರ್ಮಿಕ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು . ಹಿರಿಯ ನ್ಯಾಯವಾದಿ ಮಿತ್ತೂರು ಈಶ್ವರ ಉಪಾಧ್ಯಾಯ ಉಪಸ್ಥಿತರಿದ್ದರು. ಕೇಶವಿ ಗಿರೀಶ್ ಸ್ವಾಗತಿಸಿದರು. ಚಂದ್ರಶೇಖರ ರಾವ್ ಪುಂಚಮೆ ವಂದಿಸಿ , ನ್ಯಾಯವಾದಿ ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. 87 ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ ಖಾಸಗಿ ವಾಹನ ಚಾಲಕರಿಗೆ ಗುರುತಿನ ಚೀಟಿ ವಿತರಿಸಲಾಯಿತು .

By Suddi9

Leave a Reply

Your email address will not be published. Required fields are marked *