ಬಂಟ್ವಾಳ: ಸಂಸ್ಕ್ರತ ಭಾರತಿ ಕರ್ನಾಟಕದ ವತಿಯಿಂದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ನಡೆಯುತ್ತಿರುವ ದಶ ದಿನಗಳ ಸಂಸ್ಕ್ರತ ಶಿಕ್ಷಕ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ ಮೇ 2ರಂದು ಮಂಗಳೂರು ವಿಶ್ವಿದ್ಯಾನಿಲಯದ ಕುಲಪತಿ ಡಾ.ಕೆ ಭೈರಪ್ಪ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಸಂಸ್ಕ್ರತವನ್ನು ಸರಳ ಸಂಭಾಷಣೆಯ ಮೂಲಕ ಕಲಿಸುವ ಶಿಬಿರದ ಉದ್ದೇಶವಾಗಿತ್ತು. ಶಿಬಿರಾಧಿಕಾರಿ ಪ್ರಸಿದ್ದ ಲೇಖಕ ಡಾ. ದೊಡ್ಡೇರಂಗೇ ಗೌಡ ಬೆಂಗಳೂರು ಶಿಬಿರದ ಅನುಭವವನ್ನು ಪ್ರಸ್ತುತಪಡಿಸಲಿದ್ದಾರೆ. ಸಂಸ್ಕ್ರತ ಭಾರತಿ ನವದೆಹಲಿ ಅಖಿಲ ಭಾರತಿ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಮುಖ್ಯ ಭಾಷಣ ಮಾಡಲಿದ್ದಾರೆ. ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಉಡುಪಿ ಮುಖ್ಯ ಅತಿಥಿಯಾಗಿರುತ್ತಾರೆ. ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ತಿಳಿಸಿದ್ದಾರೆ.
