ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕ ಅನ್ನಪೂರ್ಣೆಶ್ವರೀ ದೇವಸ್ಥಾನದ ರ್ವಾಕ ಜಾತ್ರಾ ಮಹೋತ್ಸವ ಅಂಗವಾಗಿ ಹಗಲು ರಥೋತ್ಸವ ಮಂಗಳವಾರ ಜರಗಿತು.
ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ನಗರಾಭಿವೃದ್ದಿ ಸಚಿವ “ವಿನಯಕುಮಾರ್ ಸೊರಕೆ, ಯುವ ಜನ-ಕ್ರೀಡೆ – “ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಅವರುಗಳು ಸುಂಕದಕಟ್ಟೆ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಶ್ರೀ ನಿರಂಜನ ಸ್ವಾಮೀಜಿ ಅವರ ಯೋಗಕ್ಷೇಮ “ವಿಚಾರಿಸಿ ಆಶೀರ್ವಾದ ಪಡೆದರು.
ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು ಶ್ರೀ ಕ್ಷೇತ್ರ ಸುಂಕದಕಟ್ಟೆ ಭೇಟಿ ಇತ್ತು ಶ್ರೀ ನಿರಂಜನ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಮುಂಬಾೈನ ಉದ್ಯಮಿ ಪ್ರಭಾಕರ ಶೆಟ್ಟಿ, ಆಡಳಿತ ಸ”ಮಿತಿಯ ನಾರಯಣ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ಚಂಡಿಕಾಯಾಗ, ಕ್ಷೇತ್ರ ದೈವಗಳ ನೇಮೋತ್ಸವ ರಾತ್ರಿ ಉತ್ಸವ ಬಲಿ, ಅವಭ್ರತೋತ್ಸವ, ಧ್ವಜಾವರೋಹಣದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.




