ಸುದ್ದಿ9 ಕೈಕಂಬ : ಕಿಶೋರ ಹೆರಯದ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದು ಧರ್ಮದ ಜಾಗೃತಿ ಹಾಗೂ ಧಾರ್ಮಿಕತೆಯ ಉದ್ಧೀಪನಕ್ಕೆ ನಾಂದಿ. ಮನೆ-ಮನಗಳಲ್ಲಿ ಕಂಡು ಬರುತ್ತಿದ್ದ ಧರ್ಮ ನಂಬುಗೆಯ ವಾತವರಣ ತಂತ್ರಜ್ಙಾನಗಳ ಬೆಳವಣಿಗೆಯೊಂದಿಗೆ ಆಸ್ತಿತ್ವ ಕಳೆದುಕೊಳ್ಳುತ್ತಿದ್ದು ಇಂತಹ ಶಿಬಿರಗಳಿಂದ ನಾಡಿನ ಸಂಸ್ಖತಿ ಹಾಗೂ ಸಂಸ್ಕಾರದ ಉಳಿವಿನ ಹಿತದೃಷ್ಟಿಯಿಂದ ಪರಿಣಾಮಕಾರಿ ಪ್ರಯತ್ನ ನಡೆಯಲಿದೆ. ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯನಂದ  ಅವರು ಹೇಳಿದರು.


24 vp 9

 

24 vp 2

24 vp 3

24- vp 4

24 vp 5

24 vp 6

24 vp 7

24- 51

24-8

  • ಅವರು ಬಡಗೆಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ಹಿಂದೂ ಸೇವಾ ಪ್ರತಿಷ್ಠನಾ ಇವರ ಸಹಭಾಗಿತ್ವದಲ್ಲಿ ದೇವಳದಲ್ಲಿ ಆರಂಭಗೊಂಡ “ಇಂಚರ-9” ಮಕ್ಕಳ ಸಂಸ್ಕಾರ ಶಿಕ್ಷಣ ಶಿಬಿರವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.
    ದೇವಳದ ಬ್ರಹ್ಮಶ್ರೀ ಸುಭ್ರಹ್ಮಣ್ಯ ತಂತ್ರಿ ಅವರು ಕಾರ್ಯಕ್ರಮಕ್ಕೆ ಶುಭಕೋರಿ   “ಸಂಸ್ಕಾರ ಶಿಕ್ಷಣ ಶಿಬಿರ ಕೇವಲ ಕಾಲಹರಣವಾದದ ಮಕ್ಕಳ ಮೂಲಕ ಸಮಾಜಕ್ಕೆ ಪ್ರಯೋಜನವಾಗುವಂತೆ ಪರಿವರ್ತಿಸುವ ಜವಾಬ್ದಾರಿ ಮನೆಮಂದಿಯದ್ದು” ಎಂದರು . ದೇವಳದ ಆಡಳಿತ ಮಂಡಳಿಯ ಪ್ರೇಮಲತಾ ಪಿ.ಶೆಟ್ಟಿ, ನಯನ ವಿ ಶೆಟ್ಟಿ,  ಭಜನಾ ಮಂಡಳಿಯ ಕಾಂತಪ್ಪ ಶೆಟ್ಟಿ ಮುಂತಾದವರು ಉಪಸ್ಥಿರಿದ್ದರು.
    ಹಿಂದೂ ಸೇವಾ ಪ್ರತಿಷ್ಠಾನ  ಕಾರ್ಯಕ್ರಮ ಸಂಯೋಜಿಸಿದರು.
    ಶಿಬಿರದಲ್ಲಿ 50 ಮಕ್ಕಳು ಪಾಲ್ಗೊಂಡಿದ್ದು ನಾನಾ ಸಂಪನ್ಮೂಲ ವ್ಯಕ್ತಿಗಳು ವಿಭಿನ್ನ ವಿಚಾರಗಳಲ್ಲಿ ತರಭೇತಿ
    ನೀಡಲ್ಲಿದ್ದಾರೆ. ಮೇ.1 ರಂದು  ಶಿಬಿರ ಸಂಪನ್ನಗೊಳ್ಳಲಿದೆ.

By Suddi9

Leave a Reply

Your email address will not be published. Required fields are marked *