ಸುದ್ದಿ9 ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ 10ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವವು ಮೇ. 11ರಂದು ಸೋಮವಾರ ವೇದಮೂರ್ತಿ  ನಡ್ವಂತಾಡಿ ಶ್ರೀ ಉದಯ ಪಾಂಗಾಣ್ಣಾಯ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಜರಗಲಿದೆ. ಅಂದು ಬೆಳಿಗ್ಗೆ ಗಂಟೆ 10-00ಕ್ಕೆ ಏಕಾದಶ ರುದ್ರಾಭಿಷೇಕ, 11-00ಕ್ಕೆ ಅಪ್ಪದ ಪೂಜೆ, 12-00ಕ್ಕೆ ಮಹಾಪೂಜೆ ಗಂಟೆ 12-30ಕ್ಕೆ ಶಾಸ್ತವು ದೇವರಿಗೆ ಪಂಚಾಮೃತಅಭಿಷೇಕ ಹಾಗೂ 12-45ಕ್ಕೆ ದೈವ ತಂಬಿಲ ಜರಗಲಿದೆ.
6

ನಂತರ ಅನ್ನ ಸಂತರ್ಪಣೆ ನಡೆಯಲಿರುವುದು. ರಾತ್ರಿ ಗಂಟೆ 7-30ಕ್ಕೆ ಶ್ರೀ ಕಾವೇಶ್ವರ ದೇವರಿಗೆ ರಂಗಪೂಜೆ ಜರಗಲಿದೆ.  ರಂಗಪೂಜೆಯ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಂದ ದೇವಸ್ಥಾನದ ವಠಾರದಲ್ಲಿ ಶ್ರೀಮತಿ ಮತ್ತು ಶ್ರೀ ರಘು ಎಲ್.ಶೆಟ್ಟಿಯವರ ಸೇವೆಯ ರೂಪದಲ್ಲಿ ಯಕ್ಷಗಾನ ಬಯಲಾಟವು ನಡೆಯಲಿದೆ. ಎಂದು ದೇವಳದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

By Suddi9

Leave a Reply

Your email address will not be published. Required fields are marked *