ಮೂಡುಬಿದಿರೆ: ಬಡಗ ಎಡಪದವು ಶಾಸ್ತವು ಶ್ರೀಭೂತನಾಥೇಶ್ವರ ದೇವಸ್ಥಾನ ಹಾಗೂ ಶಾಸ್ತವು ಶ್ರೀದೇವರ ಮೂಲಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಳೋತ್ಸವ ಬುಧವಾರ ನಡೆಯಿತು.
ಬ್ರಹ್ಮಶ್ರೀ ಬಿ.ಕೆ.ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಶ್ರೀಭೂತನಾಥೇಶ್ವರ ದೇವರಿಗೆ ಬ್ರಹ್ಮಕಲಶಾಷೇಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿಮಠ ಶ್ರೀರಾಜಶೇಖರಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿಮಠ ಶ್ರೀರಾಜಶೇಖರಾನಂದ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀವರ್ಚನ ನೀಡಿದರು.

23-3

DSC_0034

Bhutanateshwara (10) (1)
DSC_0210

DSC_0482

 

23-1

23-2

 

Bhutanateshwara (7)
ಶ್ರೀಕ್ಷೇತ್ರ ಭೂತನಾಥೇಶ್ವರದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಅವರ ತಾಯಿ ಪ್ರೇಮಲತಾ ಶೆಟ್ಟಿ, ಅಜರ್ುನ್ ರೈ, ಉಳಿಪಾಡಿಗುತ್ತು ರಾಜೇಶ್ ನಾಯಕ್, ಶ್ರೀಕ್ಷೇತ್ರ ಪೊಳಲಿಯ ತಾರನಾಥ ಆಳ್ವ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಸುರೇಶ್ ಸಾಲ್ಯಾನ್, ಪ್ರವೀಣ್ ಅಂಚನ್ ಅಕರ್ುಳ, ಸತ್ಯಜಿತ್ ಸುರತ್ಕಲ್, ಯತಿರಾಜ್ ಶೆಟ್ಟಿ, ಅಲ್ತಾಫ್, ತಮ್ಮಣ್ಣ ಶೆಟ್ಟಿ, ಕಾಂತಪ್ಪ ಶೆಟ್ಟಿ, ಸುಬಾಸ್ ರಾವ್, ಕುಸುಮಕರ ಮೊದಲಾದವರಿದ್ದರು.
ಸಾಂಸ್ಕೃತಿಕ ವೈಭವ:
ಶ್ರೀಕ್ಷೇತ್ರ ಭೂತನಾಥೇಶ್ವರ ಬ್ರಹ್ಮಕಲಶಾಭೀಷೇಕ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬುಧವಾರ ಬೆಳಗ್ಗೆ ರಾಜ್ಯಪ್ರಶಸ್ತಿಪುರಸ್ಕೃತ ಕಸ್ತೂರಿ ಅವರಿಂದ ಭಕ್ತಿಗಾನ ಸುಧ, ಮಧ್ಯಾಹ್ನ ಬಲೆತೆಲಿಪಾಲ ಖ್ಯಾತಿಯ ದೀಪಕ್ ರೈ ಮತ್ತು ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಬಳಿಕ ಡ್ಯಾನ್ಸಿಂಗ್ ಸ್ಟಾರ್ ಎಡಪದವು ಹಾಗೂ ಕುಂದಾಪುರದ ಅಮೇಝಿಂಗ್ ಸ್ಟೆಪ್ಸ್ ತಂಡದಿಂದ ನೃತ್ಯ ವೈವಿದ್ಯವಿತ್ತು. ನಮ್ಮ ಕಲಾವಿದೆ ಬೆದ್ರ ತಂಡದಿಂದ ಅಪುಜಿ ಪಂಡ ದೀಪುಜಿ ಎಂಬ ಹಾಸ್ಯ ನಾಟಕ ನಡೆಯಿತು.

ಇದೇ ಸಂದರ್ಭದಲ್ಲಿ  ಸುರೇಶ್, ಸಂತೋ ಷ್ ಅವರು  ಭೂತನಾಥೇಶ್ವರ ದೇವರಿಗೆ  ಬ್ರಹತ್ ಗಾತ್ರದ   ಎಕ್ಕಾ ಹೂವಿನ ಮಾಲೆ ನೀಡಿದರು.

By Suddi9

Leave a Reply

Your email address will not be published. Required fields are marked *