ಬಂಟ್ವಾಳ: ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಬೀದಿ ದೀಪ ಹಾಗೂ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿದ್ಯುತ್ ಬಿಲ್ಲು ಬಾಕಿ ಪಾವತಿಗಾಗಿ ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯತ್ಗಳಿಗೆ ಬಿಡುಗಡೆ ಮಾಡುತ್ತಿರುವ ಶಾಸನಬದ್ದ ಅನುದಾನದಲ್ಲಿ ಶೇ 60% ಕಡಿತವಾಗಿ ಈಗಾಗಲೇ ನೇರವಾಗಿ ವಿದ್ಯುತ್ ನಿಗಮಗಳಿಗೆ ಜಮೆಯಾಗುತ್ತಿದೆ.
ಇದರಿಂದ ಗ್ರಾಮ ಪಂಚಾಯತ್ಗಳಿಗೆ ಬಹಳ ತೊಂದರೆಯಾಗುತ್ತಿದ್ದು ಅಭಿವೃದ್ದಿ ಕಾಮಗಾರಿ ನಡೆಸಲು ಬಹಳ ಕಷ್ಟದಾಯಕ ಪರಿಸ್ಥಿತಿ ಎದುರಾಗಿದ್ದು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ 13ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುತ್ತಿರುವ ಅನುದಾನವನ್ನು ನಂಬಿಕೊಂಡು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳು ಕಾಮಗಾರಿ ನಡೆಸಿಕೊಂಡು ಬರುತ್ತಿರುವುದರಿಂದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳಿಗೆ ಗೌರವದಿಂದ ಓಡಾಡಲು ಸಾಧ್ಯವಾಗಿದೆ. ಹಾಗೂ ಈಗಾಗಲೇ ತುರ್ತು ಕಾಮಗಾರಿಗಳಿಗಾಗಿ ಕ್ರಿಯಾಯೋಜನೆ ರೂಪಿಸಿ ಕಾಮಗಾರಿಗಳು ಪ್ರಗತಿಯಲ್ಲಿರುವುದು ಸರ್ವೆ ಸಾಮಾನ್ಯವಾಗಿರುವುದು.
ವಿಷಯ ಹೀಗಿರುವಾಗ ಸರಕಾರ ದಿಡೀರನೆ ವಿದ್ಯುತ್ ಬಿಲ್ಲುಗಳ ಬಾಕಿ ಹಣ ನೆಪವೊಡ್ಡಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ 13ನೇ ಹಣಕಾಸು ಅನುದಾನದಲ್ಲಿ ಶೇ 25ರಷ್ಟು ಅನುದಾನ ಕಡಿತಗೊಳಿಸಿ ನೇರವಾಗಿ ವಿದ್ಯುತ್ ನಿಗಮಕ್ಕೆ ಜಮೆ ಮಾಡಲು ನಿರ್ಧರಿಸಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ.
ಆದುದರಿಂದ 13ನೇ ಹಣಕಾಸು ಅನುದಾನವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದೆ ನೇರವಾಗಿ ಎಲ್ಲಾ ಅನುದಾನವನ್ನು ಗ್ರಾಮ ಪಂಚಾಯತ್ ಗಳಿಗೆ ಬಿಡುಗಡೆ ಮಾಡುವಂತೆ ವಿನಂತಿ.
