ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಮಹಾಸಭೆಯು ತು ಳು ಶಿವಳ್ಳಿ ಸಮುದಾಯ ಭವನ ಬಿ.ಸಿ.ರೋಡ್ ನಲ್ಲಿ ಮಾ.21 ಮಂಗಳವಾರ ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ತಹಶೀಲ್ದಾರ್ ಕೆ.ಕೃಷ್ಣಪ್ಪ ಪೂಜಾರಿ, ನಿವೃತ್ತ ಅಸೋಸಿಯೇಟ್ ಪ್ರೋಫೆಸರ್ ಕೆ.ಪಿ.ಸೂಫಿ ಭಾಗವಹಿಸಿದ್ದರು.
ಪಿಂಚಣಿದಾರರಲ್ಲಿ 75ವರ್ಷ ತುಂಬಿದ ನಾರಾಯಣ ಭಟ್ ಮಂಜನಾಡಿ , ಅಮ್ಮು ಶೆಟ್ಟಿ ಮಂಗಿಲಪದವು , ವಸಂತಿ ಎಸ್.ಶರ್ಮಾ, ಶಾಂಭವಿ ಕೊಡಂಗೆ , ಯಮುನಾ ವಿಟ್ಲ , ಇಬ್ರಾಹಿಂ ಬ್ಯಾರಿ ಮಂಚಿ , ಮಹಾಲಕ್ಷ್ಮಿ ಬಂಟ್ವಾಳ , ಬಾಬು ಮೂಲ್ಯ ಬಿ.ಸಿ.ರೋಡ್ ರವರನ್ನು ಸನ್ಮಾನಿಸಲಾಯಿತು.

ನಿವೃತ್ತಿ ವೇತನ ತಡೆÀ ಮಾಡಬಾರದು. ಹಿರಿಯ ನಾಗರಿಕರಿಗೆ ಬಿ.ಸಿ.ರೋಡ್ ನಲ್ಲಿ ಉದ್ಯಾನವನ(ಪಾರ್ಕ್) ನಿರ್ಮಿಸಬೇಕು ಮತ್ತು ಹಿರಿಯ ನಾಗರಿಕರಿಗೆ ವೈದ್ಯಕೀಯ ಸವಲತ್ತು ಒದಗಿಸುವರೇ ಸರಕಾರವನ್ನು ಕೇಳಿಕೊಳ್ಳುವುದಾಗಿ ನಿರ್ಣಯ ಮಾಡಿಕೊಳ್ಳಲು ಅಧ್ಯಕ್ಷರು ಎಲ್ಲರ ಸಹಕಾರವನ್ನು ಕೋರಿದರು. ತುಳು ಲಿಪಿ ಅಕ್ಷರ ಮಾಲೆ ಪ್ರದರ್ಶನ ಮಾಡಲಾಗಿತ್ತು.
ಉಪಾಧ್ಯಕ್ಷ ಲಿಂಗಪ್ಪ ಮಾಸ್ತರ್ ಸ್ವಾಗತಿಸಿದರು. ಕಾರ್ಯದರ್ಶಿ ನಿಲೋಜಿರಾವ್ ವರದಿವಾಚಿಸಿದರು. ಕೋಶಾಧಿಕಾರಿ ಕೆ.ಆರ್.ಪುತ್ತುರಾಯ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ದಾಮೋದರ್ ವಂದಿಸಿ , ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
