ಹಲಸು ಪ್ರೇಮಿಕೂಟ, ಬಂಟ್ವಾಳ ಕಳೆದ ಹಲವು ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ, ಮಾರುಕಟ್ಟೆ, ತಳಿ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲಸಿನ ಹಬ್ಬ, ತಳಿ ಆಯ್ಕೆ ಮುಂತಾದ ಕಾರ್ಯಕ್ರಮಗಳು ಯಶಸ್ವಿಯಾಗಿ ಸದ್ದಿಲ್ಲದೆ ನಡೆದಿದೆ. ಬಂಟ್ವಾಳ ತಾಲೂಕಿನ ಸಾವಿರಾರು ಮರಗಳಿಂದ ಉತ್ತಮತಳಿಯ ಉತ್ಕ್ಷ್ಟ ಗುಣಗಳ ಮರಗಳನ್ನು ಹಲಸು ಸ್ನೇಹಿ ಕೂಟ, ಉಬರು ಹಾಗೂ ಸಮಾನ ಮನಸ್ಕರಿಂದ ಸಂಗ್ರಹಿಸಿ ತಳಿ ಆಯ್ಕೆ ಜರುಗಿ ಇಪ್ಪತ್ತಕ್ಕೂ ಹೆಚ್ಚಿನ ತಳಿಗಳು ಕಸಿ ತಜ್ಞರಾದ ಉಡುಪಿಯ ಗುರುರಾಜ ಬಾಳ್ತಿಲ್ಲಾಯರು, ಆಲಂಕಾರಿನ ಕಸಿ ಕೆದಿಲಾಯರು, ಪುತ್ತೂರಿನ ಜಾಕ್ ಅನಿಲ್ ಮುಂತಾದವರ ಆಸಕ್ತಿಯಿಂದ ಇಂದು ಸಾವಿರಾರು ಆಯ್ದ ತಳಿಯ ಗಿಡಗಳು ವಿವಿಧ ಆಸಕ್ತ ರೈತರ ತೋಟಗಳಲ್ಲಿ ಬೆಳೆಯುತ್ತಿವೆ. ಮುಳಿಯದ ವೆಂಕಟಕೃಷ್ಣ ಶರ್ಮರ ತೋಟದಲ್ಲಿ ಹದಿನೈದಕ್ಕೂ ಹೆಚ್ಚಿನ ತಳಿಯ ಇನ್ನೂರಕ್ಕೂ ಮಿಕ್ಕಿದ ಗಿಡಗಳ ಫಲಗಳು ಇನ್ನೆರಡು ಮೂರು ವರ್ಷಗಳ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿವೆ. ದೋಸೆಗೆ ಒಂದು ತಳಿ, ಶ್ರಾವಣ ಮಾಸದಲ್ಲಿ ಫಲ ಕೊಡುವ ಒಂದು ತಳಿ, ಜನವರಿಯಲ್ಲಿ ಹಣ್ಣಾಗುವ ತಳಿ, ವರ್ಷವಿಡೀ ಕಾಯಿ ಬಿಡುವ “ನಿರಂತರ”, “ಅನನ್ಯ”, “ಪ್ರಶಾಂತಿ”, “ಅತಿಮಧುರ” ಮುಂತಾಗಿ ನಾಮಕರಣಗೊಂಡು ಇಂದು ಸಾವಿರಾರು ಗಿಡಗಳು ರೈತರ ಜಮೀನಿನಲ್ಲಿ ಅಭಿವೃದ್ಧಿಗೊಂಡಿವೆ.
005

001

002

003

004
ಅಡ್ಯನಡ್ಕ ವಾರಣಾಶಿ ಕೃಷಿ ಸಂಶೋಧನಾ ಕೇಂದ್ರದ ದೂರದೃಷ್ಟಿಯ ಫಲವಾಗಿ ಆಯ್ದ ತಳಿಗ¼ “ಮಾತೃ ಗಿಡ”ಗಳು ಅಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿವೆ. “ಹಲಸಿನ ಪ್ರತಿಯೊಂದು ಗಿಡವೂ ಒಂದು ತಳಿ; ಒಂದಕ್ಕಿಂತ ಒಂದು ರುಚಿ, ಗಾತ್ರ, ಬಣ್ಣಗಳಲ್ಲಿ ವಿಭಿನ್ನ” ಎನ್ನುವುದು ಹಲಸುಪ್ರೇಮಿ ಶರ್ಮರ ಅನುಭವದ ನುಡಿ.
ಹಲಸನ್ನು ಮರದಿಂದ ನೆಲಕ್ಕೆ ಬೀಳದಂತೆ ಕೊಯ್ಯವುದು ಒಂದು ಪ್ರಮುಖವಾದ ಸಮಸ್ಯೆ. ಕಾರ್ಮಿಕರ ಸಮಸ್ಯೆ ತೀವ್ರವಾಗಿರುವ ಈ ಘಟ್ಟದಲ್ಲಿ ಈ ಸವಾಲಿಗೆ ಹಲಸು ಬೆಳೆಗಾರರು ಪರಿಹಾರ ಕಂಡುಕೊಳ್ಳಬೇಕಾಗಿದೆ. ಬೇರೆ ದೇಶಗಳಲ್ಲಿ ಮರಗಳನ್ನು ಅಡ್ಡ ಬೆಳಸಿ (ಪ್ರೂನಿಂಗ್) ಸಮಸ್ಯೆಗೆ ಪರಿಹಾರ ಕಂಡಕೊಂಡಿದ್ದರೂ, ನಮ್ಮಲ್ಲಿ ಈ ಪ್ರಯೋಗ ಇನ್ನಷ್ಟೇ ನಡೆಯಬೇಕಾಗಿದೆ.
ಹಲಸಿನ ಕೃಷಿಯ ಕಲ್ಪನೆಯೇ ಇಲ್ಲದ ಕಾಲದಲ್ಲಿ, ಎಂದರೆ ಸುಮಾರು ನಲ್ವತ್ತು ವರ್ಷಗಳ ಮೊದಲೇ ಹಲಸಿನ ಮೌಲ್ಯವನ್ನು ಮನಗಂಡು ತಮ್ಮ ತೋಟದ ಬದುಗಳಲ್ಲಿ ನೂರಾರು ಹಲಸಿನ ಗಿಡಗಳನ್ನು ನೆಟ್ಟು ಬೆಳಿಸಿರುವ ಬಂಟ್ವಾಳ ನರಿಕೊಂಬಿನ ಕರ್ಬೆಟ್ಟು ಪುಂಡಲೀಕ ನಾಯಕ್ ಇವರು ಇಂದು ಹಲಸಿನ ಬೇಸಾಯವನ್ನು ಕೈಗೊಳ್ಳಬಯಸುವ ಎಲ್ಲ ರೈತರಿಗೂ ಮೇಲ್ಪಂಕ್ತಿಯಾಗಿದ್ದಾರೆ.
ಇಂದು ಹಲಸಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದರೂ ಹಲಸನ್ನು ಬೆಳೆಯುವ ರೈತರಿಗೆ ಅವರ ಶ್ರಮದ ಪ್ರತಿಫಲ ಮಧ್ಯವರ್ತಿಗಳ ಹಾವಳಿಯಿಂದಾಗಿ ಸಿಗದ ಕಾರಣ ರೈತರು ಹಲಸಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ರೈತ-ಗ್ರಾಹಕರ ನಡುವಿನ ಕೊಂಡಿಯಾಗುವುದು ಹಲಸಿನ ಸಂತೆಯ ಮೊದಲ ಹೆಜ್ಜೆಯಾಗಬೇಕೆಂಬುದು ನಮ್ಮ ಆಶಯ.
ಹಲಸಿನ ಹಣ್ಣಿನ ಒಣಸೊಳೆ, ಮಹಾರಾಷ್ಟ್ರದ ಹಲಸಿನ ಪಾಣಸ್ ಪೋಳಿ, ಹಲ್ವ, ಚಿಪ್ಸ್, ಹಪ್ಪಳ, ಸ್ಕ್ವಾಶ್, ಐಸ್‍ಕ್ರೀಮ್, ಚಾಕೊಲೇಟ್ ಹೀಗೆ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪಟ್ಟಿ ಬಹಳ ದೊಡ್ಡದಿದೆ ಹಾಗೂ ಈ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಹೀಗಿದ್ದರೂ, ಹಲವು ಕಾರಣಗಳಿಂದ ಹಲಸಿನ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿಲ್ಲ. ಸೂಕ್ತ ತರಬೇತಿ ನೀಡಿ, ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಹಲಸಿನ ಉತ್ಪನ್ನಗಳು ಪ್ರವೇಶಿಸುವಂತೆ ಮಾಡುವ ಪ್ರಯತ್ನದ ಒಂದು ಭಾಗವಾಗಿ ಈಗಾಗಲೇ ನಮ್ಮ ಸಂಘದ ಸದಸ್ಯರು ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಭೇಟಿಕೊಟ್ಟು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಪಡೆದು ಬಂದಿರುತ್ತಾರೆ. ಈ ಅನುಭವವನ್ನು ಉಚಿತವಾಗಿ ಎಲ್ಲ ಆಸಕ್ತರಿಗೆ ವರ್ಗಾಯಿಸುವುದು ನಮ್ಮ ಸಂಘದ ಆಶಯಗಳಲ್ಲೊಂದು.
ಕೇವಲ ಒಂದು ¯ಕ್ಷ ರೂ. ಬಂಡವಾಳದಲ್ಲಿ ಡ್ರೈಯರ್, ಚಿಪ್ಸ್ ಕಟ್ಟಿಂಗ್ ಮೆಶಿನ್, ಪ್ಯಾಕಿಂಗ್ ಮೆಶಿನ್ ಮತ್ತು ಇತರ ಕೆಲವು ಉಪಕರಣಗಳನ್ನು ಹೊಂದಿಸಿ, ಕನಿಷ್ಠ ದಿನಕ್ಕೆ ಮೂರು ಗಂಟೆ ದುಡಿದಲ್ಲಿ ಸ್ವ ಉದ್ಯೋಗದೊಂದಿಗೆ ಇತರರಿಗೂ ಉದ್ಯೋಗ ನೀಡಿ ಉತ್ತಮ ಆದಾಯ ಪಡೆಯುವ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಉಚಿತ ತರಬೇತಿ ನೀಡುವ ಒಂದು ಕಾಮನ್ ಫೆಸಿಲಿಟೇಶನ್ ಸೆಂಟರ್ ನಡೆಸಬೇಕೆಂಬುದು ಹಲಸು ಪ್ರೇಮಿ ಮಲ್ಯರ ಕಲ್ಪನೆ.
ಅಡ್ಯಾರಿನ ಸಹ್ಯಾದ್ರಿ ಎಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಸಂಘದ ಸಹಕಾರದಿಂದ ಹಲಸಿನ ಹಣ್ಣಿನ ಹಲ್ವವನ್ನು ತಯಾರಿಸುವ ಕಡಿಮೆ ಬೆಲೆಯ ಯಂತ್ರವನ್ನು ಈಗಾಗಲೇ ರೂಪಿಸಿದ್ದಾರೆ. ಇದು ಹಲಸಿನ ಉದ್ಯಮದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಬಹುದಾಗಿದೆ.
ಕೇಂದ್ರೀಯ ಕೃಷಿ ಯಂತ್ರೋಪಕರಣಗಳ ಸಂಶೋಧನಾ ಕೇಂದ್ರದ ಡಾ. ಜಾಕೋಬ್ ಅಣ್ಣಾಮಲೈ, ಹಿರಿಯ ಕೃಷಿವಿಜ್ಞಾನಿ ಡಾ. ರವೀಂದ್ರ ನಾಯಕ್ ಹಲಸಿನ ಉದ್ಯಮದ ಅಗಾಧತೆಯನ್ನು ಮನಗಂಡು ಹಲಸುಪ್ರೇಮಿಗಳನ್ನು ಭೇಟಿಯಾಗಿ ಯಂತ್ರೋಪಕರಣಗಳ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ವಿಚಾರ ವಿನಿಮಯ ನಡೆಸಿದ್ದಾರೆ. ಕೊಯಮತ್ತೂರಿನ ಯಂತ್ರೋದ್ಯಮಿ ಎನ್. ಆರ್. ನಟರಾಜನ್ (ಪೊನ್ಮಣಿ ಇಂಡಸ್ಟ್ರೀಸ್) ಇವರು ಸಹ ಈ ನಿಟ್ಟಿನಲ್ಲಿ ತೀವ್ರ ಆಸಕ್ತಿ ತಳೆದಿದ್ದಾರೆ.
ಕರ್ನಾಟಕದ ಪ್ರಮುS ಕೃಷಿಪತ್ರಿಕೆಯಾದ “ಅಡಿಕೆ ಪತ್ರಿಕೆ”ಯು ಹಲಸಿನ ಕುರಿತಾಗಿಯೇ ಹಲವು ವಿಶೇಷಾಂಕಗಳನ್ನು ಪ್ರಕಟಿಸಿ ಹಲಸಿನ ಕುರಿತು ಜಾಗೃತಿಯನ್ನು ಮೂಡಿಸಿದೆ. ಇತರ ಅನೇಕ ಕೃಷಿ ಪತ್ರಿಕೆಗಳೂ ಹಲಸಿನ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿವೆ.
ಹಲಸಿನ ಹಣ್ಣಿನಲ್ಲಿ ಈ ಕೆಳಗಿನ ವೈದ್ಯಕೀಯ ಗುಣಗಳಿರುವುದನ್ನು ದೃಢೀಕರಿಸಲಾಗಿದೆ:
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ\
ಕ್ಯಾನ್ಸರಿನಿಂದ ರಕ್ಷಣೆ
ಉತ್ತಮ ಜೀರ್ಣಕಾರಿ
ಕಣ್ಣು ಹಾಗೂ ಚರ್ಮಗಳ ಆರೋಗ್ಯವನ್ನು ರಕ್ಷಿಸುತ್ತದೆ.
ಶಕ್ತಿ ವರ್ಧಕ
ಆಸ್ತಮಾ ನಿರೋಧಕ
ಮೂಳೆಗಳನ್ನು ದೃಢಗೊಳಿಸುತ್ತದೆ.
ರಕ್ತವರ್ಧಕ
ಥೈರಾಯ್ಡ್‍ನ ಆರೋಗ್ಯವನ್ನು ರಕ್ಷಿಸುತ್ತದೆ.
ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಹಲಸು ಸ್ನೇಹಿ ಕೂಟವನ್ನು ಈಗಾಗಲೇ ಅಮೆರಿಕಾದ ಯುವತಿ ಗ್ಲೋಬಲ್ ವಿಲೇಜ್ ಫ್ರುಟ್ ಇದರ ಸಿ ಇ ಓ ಆನ್‍ಮೇರಿ, ಅಮೆರಿಕಾ ಹವಾಯಿಯ ಹಣ್ಣಿನ ರಾಯಭಾರಿ ಕೆನ್‍ಲವ್, ಆಸ್ಟ್ರೇಲಿಯಾದ ಯುವಕ ಜೂಲಿಯನ್ ಫ್ಯಾಂಗ್ ಇವರು ಭೇಟಿಯಾಗಿ, ಜಾಗತಿಕ ಮಟ್ಟದಲ್ಲಿ ಹಲಸಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನವೂ ನಡೆಯುತ್ತಿದೆ.
ಏಪ್ರಿಲ್ 26 ರವಿವಾರ ಪಾಣೆಮಂಗಳೂರು ಹಳೆ ಟೋಲ್‍ಗೇಟ್ ಬಳಿ ಇರುವ “ನವರಂಗ್” ಆವರಣದಲ್ಲಿ ಮಾರಾಟಗಾರರಿಗೆ ಉಚಿತ ಮಾರುಕಟ್ಟೆಯ ವ್ಯವಸ್ಥೆ, ಕಸಿ ತಜ್ಞರಿಂದ ಉತ್ತಮ ತಳಿ ಆಯ್ಕೆ, ಮಾರುಕಟ್ಟೆಯ ಬಗ್ಗೆ ಸಂವಾದ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಹಿರಿಯ ಕೃಷಿಕರಾದ ಡಾ. ಕೆ.ಎಸ್. ಕಾಮತ್, ಕೃಷಿ ವಿಜ್ಞಾನಿ ಡಾ. ಸರಿತಾ ಹೆಗ್ಡೆ, ಶ್ರೀ ಪಡ್ರೆ, ನಿವೃತ್ತ ಅರಣ್ಯಾಧಿಕಾರಿ ಜಿ. ವೇಗಸ್, ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ, ಪತ್ರಕರ್ತ ನಾ. ಕಾರಂತ ಪೆರಾಜೆ, ಮುಳಿಯದ ವೆಂಕಟಕೃಷ್ಣ ಶರ್ಮ ಮೊದಲಾದ ಸಮಾನ ಮನಸ್ಕ ಹಲಸು ಪ್ರೇಮಿಗಳ ಉಪಸ್ಥಿತಿಯಲ್ಲಿ ಬೆಳಗ್ಗೆ 10-00ರಿಂದ ಸಂಜೆ 5-00ರ ತನಕ ಹಲಸಿನ ಸಂತೆ ನಡೆಯಲಿರುವುದು
ಹಲಸು ಪ್ರೇಮಿಗಳಿಗೆ ಸ್ವಾಗತ

By suddi9

Leave a Reply

Your email address will not be published. Required fields are marked *