ಸುದ್ದಿ9 ಕೈಕಂಬ ; [ಮಾ 26 ]ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಬುಧವಾರ ನಾಮಪತ್ರ ಸಲ್ಲಿಸಿದರು.

. ನಾಮಪತ್ರ ಸಲ್ಲಿಸುವ ಮೊದಲು ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ ಮಿಲಾಗ್ರೀಸ್ ಚರ್ಚ್ ಗೆ ತೆರಳಿ ದೇವರ ಆಶೀರ್ವಾದ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ನನ್ನದೇನಿದ್ದರೂ ಮೋದಿ ವಿರುದ್ಧ ಸ್ಪರ್ಧೆ ಯಾಕೆಂದರೆ ಬಿಜೆಪಿ ದೇಶಾದ್ಯಂತ ಮೋದಿ ಹೆಸರಲ್ಲಿ ಮತ ಕೇಳುತ್ತಿದೆ. ಹಾಗಾಗಿ ಜೆಡಿಎಸ್ ಮುಂತಾದ ಪಕ್ಷಗಳು ಇಲ್ಲಿ ನಗಣ್ಯ ಎಂದು ತಿಳಿಸಿದರು. ನಮ್ಮ ಚುನಾವಣಾ ಅಭಿಯಾನವು ಈಗಾಗಲೇ ಆರಂಭವಾಗಿದ್ದು ಕಾರ್ಯಕರ್ತರು ತಾವೇ ಚುನಾವಣೆಯಲ್ಲಿ ಸ್ಪರ್ಧಿಸುತ್ತದ್ದೇವೆ ಎಂಬಂತೆ ಶ್ರಮಿಸುತ್ತಿದ್ದಾರೆ. ನಮ್ಮ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯ ವೈಖರಿಯನ್ನು ಜನರು ಮೆಚ್ಚಿದ್ದಾರೆ. ನಾವು ದೇಶವನ್ನು ಧಾರ್ಮಿಕ ಸೌಹಾರ್ದತೆಯ ಬುನಾದಿಯಲ್ಲಿ ಮುಂದೆ ಕೊಂಡೊಯ್ಯಬೇಕು. ಯಾವುದೇ ರೀತಿಯ ಒಡೆದು ಆಳುವ ನೀತಿಯನ್ನು ಉಪಯೋಗಿಸಬಾರದು ಎಂದು ಪೂಜಾತಿ ತಿಳಿಸಿದರು. ಸಚಿವ ರಮಾನಾಥ ರೈ, ಯು.ಟಿ ಖಾದರ್ , ಶಾಸಕ ಜೆ.ಅರ್ ಲೋಬೊ, ವಸಂತ ಬಂಗೇರ ಮತ್ತು ಕಾಂಗ್ರೆಸ್ ನ ಹಲವಾರು ಹಿರಿಯ ಮುಖಂಡರ ಉಪಸ್ಥಿತರಿದ್ದರು.




