ಬಂಟ್ವಾಳ : ಸ್ಥಳಿಯ ಗ್ರಾ.ಪಂ.ಗೆ ಮನವಿ ನೀಡಿ ಆಯಿತು, ತಾ.ಪಂ.ಜಿ.ಪಂ. ಶಾಸಕರಿಗೆ ಮನವಿ ನೀಡಿದ್ದಾಯಿತು ಇದು ಫಲಕಾರಿಯಾಗದೆ ಇರುವಾಗ ಸ್ಥಳಿಯರು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಆಯಿತು ಆದರೆ ಇದು ಯಾವುದಕ್ಕೂ ಬೆಲೆ ಇಲ್ಲದಂತಾಗಿದೆ ರಸ್ತೆಗೆ ಡಾಮರೀಕರಣ ಮಾತ್ರ ಇನ್ನು ನಡೆದಿಲ್ಲ. ಇದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತಿ ವ್ಯಾಪ್ತಿಗೊಳಪಟ್ಟ ಕೂರಿಯಳ ಸಂಪರ್ಕ ರಸ್ತೆ. ಕಳೆದ ಹಲವಾರು ವರ್ಷಗಳಿಂದ ಈ ರಸ್ತೆ ಗೆ ಡಾಮರೀಕರಣ ನಡೆಸುವಂತೆ ಸಂಬಂದಪಟ್ಟವರಲ್ಲಿ ಎಷ್ಟೇ ಮನವಿ ಮಾಡಿದರೂ ಡಾಮರೀಕರಣ ಮಾತ್ರ ಕನಸಿನ ಮಾತಾಗಿ ಉಳಿದಿರುವುದರ ಬಗ್ಗೆ ಜನ ರೋಸಿ ಹೊಗಿದ್ದಾರೆ.


ಗ್ರಾಮೀಣ ಜನತೆಯ ಮೂಲಭೂತ ಸೌಲಭ್ಯಗಳಲ್ಲೊಂದಾದ ರಸ್ತೆ ಇಂದಿನ ದಿನಗಳಲ್ಲಿ ಜನಜೀವನದ ದೈನಂದಿನ ಚಟುವಟಿಕೆಗಳ ಮೇಲೆ ಮಹತ್ತರ ಪರಿಣಾಮ ಬೀರುತ್ತಿದ್ದು ಅಂತಹ ರಸ್ತೆ ಸಂಚಾರಕ್ಕೆ ಅನಾನುಕೂಲವಾಗಿದ್ದರೆ ಜನತೆ ಆಕ್ರೋಶಗೊಳ್ಳುವುದು ಸಹಜವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಆದ್ಯತೆ ನೀಡಿದರೂ ಜನರ ಆವಶ್ಯಕತೆ ಈಡೇರುವುದಿಲ್ಲ . ಈ ರೀತಿ ಕಡೆಗಣನೆಗೊಂಡ ರಸ್ತೆಯೇ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತಿ ವ್ಯಾಪ್ತಿಗೊಳಪಟ್ಟಿತು ಕೂರಿಯಳ ಸಂಪರ್ಕ ರಸ್ತೆ.
ಕಳೆದ ಹಲವು ವರ್ಷಗಳಿಂದ ಈ ರಸ್ತೆ ಮರುಡಾಮರೀಕರಣಗೊಂಡಿಲ್ಲವೆಂದು ಸಾರ್ವಜನಿಕರು ತಿಳಿಸಿದ್ದಾರೆ ಅಲ್ಲದೆ ತೇಪೆ ಕಾರ್ಯ ಕೂಡಾ ನಡೆಸಿಲ್ಲ ಪ್ರಸ್ತುತ ಪರಿಸ್ಥಿತಿಯಲ್ಲಿ ತೇಪೆ ಕಾರ್ಯ ಕೈಗೆತ್ತುಕೊಳ್ಳುವ ಪ್ರಸ್ತಾಪ ಬಂದಾಗ ಜನ ವಿರೊದ ವ್ಯಕ್ತಪಡಿಸಿದ್ದಾರೆ ಯಾಕೆಮದರೆ ರಸ್ತೆಯನ್ನು ಹುಡುಕಬೇಕಾದ ಸ್ಥಿತಿಯಲ್ಲಿರುವ ಸಂದರ್ಭ ತೇಪೆ ಹಾಕುವುದು ಸರಿಯಲ್ಲ ಡಾಮರಿಕರಣವೇ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ
. ಕಳೆದ ವರ್ಷದಿಂದ ಈ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಡಾಮರು ಕಿತ್ತುಹೋಗಿ ಜಲ್ಲಿಕಲ್ಲುಗಳು ರಸ್ತೆಯಲ್ಲಿ ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆವುಂಟು ಮಾಡುತ್ತಿದೆ.
ಈ ಪರಿಸರದ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗ ಬೇಕಾದರೆ, ಗ್ರಾಮಸ್ಥರು ತಾಲೂಕು ಕೇಂದ್ರ ಸ್ಥಾನವನ್ನು ತಲುಪಬೇಕಾದರೆ ಈ ರಸ್ತೆಯನ್ನೇ ಅವಲಂಬಿಸಬೇಕು. ಇದಕ್ಕಾಗಿ ಇರುವ ಏಕೈಕ ಸರಕಾರಿ ಬಸ್ಸನ್ನು ಆಶ್ರಯಿಸುತ್ತಾರೆ. ರಸ್ತೆ ದುರವಸ್ಥೆಯಿಂದ ಆ ಬಸ್ಸು ಕೂಡಾ ಸಮರ್ಪಕವಾಗಿ ಸಂಚಾರ ನಡೆಸುತ್ತಿಲ್ಲ . ಎಪ್ರಿಲ್ 1 ರಿಂದ ಬಸ್ ಸಂಚಾರ ಸ್ಥಗಿತಗೊಳಿಸುವುದಾಗಿ ಬಸ್ ಸಿಬ್ಬಂದಿಗಳು ಹೇಳಿಕೊಂಡಿದ್ದು ಗ್ರಾಮಸ್ಥರು ಆತಂಕ ಪಡುವಂತೆ ಮಾಡಿದೆ. ಆಸ್ಪತ್ರೆಗೆ ಬಂಟ್ವಾಳಕ್ಕೆ ಹೋಗಬೇಕಾದರೆ ಈ ರಸ್ತೆಯಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ದುಪ್ಪಟ್ಟು ದರ ನೀಡಿದರೂ ಅಟೋರಿಕ್ಷಾ ಬರಲು ಒಪ್ಪುವುದಿಲ್ಲ ಎಂದು ಗ್ರಾಮಸ್ಥರ ಅಳಲು ತೋಡಿಕೊಳ್ಳುತ್ತಾರೆ. ನಾವೂ ಜನಪ್ರತಿನಿಧಿಗಳ ಮರುಲು ಮಾತು ಕೇಳಿ ಪ್ರತಿ ಭಾರಿಯೂ ಮತ ನೀಡಿದ್ದೇವೆ ಆದರೆ ಈ ಭಾರಿ ಮಾತ್ರ ಯೋಚನೆ ಮಾಡಬೇಕಾಗಿದೆ ಗ್ರಾ.ಪಂ.ಚುನಾವಣೆಯ ಸಂದರ್ಭ ನಮಗೆ ರಸ್ತೆ ಮಾಡದಿದ್ದರೆ ಮತ್ತೆ ಉಗ್ರ ಹೋರಾಟವನ್ನು ಮಾಡುತ್ತೇವೆ ಎಮದು ಹೇಳುತ್ತಿದ್ದಾರೆ ಇಲ್ಲಿನ ಸ್ಥಳಿಯರು.


