ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್, ಶ್ರೀ ಸಾಯಿಇ ಏಜುಕೇಶನಲ್ ಟ್ರಸ್ಟ್ ಬಿ.ಸಿರೋಡ್ ಇದರ ವಾರ್ಷಿಕ ದಿನಾಚರಣೆ ಮತ್ತು ಶ್ರೀ ಸಾಯಿ ಕೋಚಿಂಗ್ ಸೆಂಟರ್ ಇದರ ಉದ್ಘಾಟನೆಯನ್ನು ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಯರ್ಪಲ್ಕೆ ಹೆಗ್ಡೆ ಇಂಗೀಷ್ ಮೀಡಿಯಂ ಸ್ಕೂಲ್ನ ಸಂಚಾಲಕ ಎನ್.ಎಸ್.ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯ ಕರ್ನಾಟಕದ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪುರಸಭಾ ಸದಸ್ಯೆ ಸುಗುಣ ಕಿಣಿ, ಬಿ.ಸಿ.ರೋಡ್ ನ ಕಟ್ಟೆ ಪ್ರೆಂಡ್ಸ್ನ ಲಕ್ಸನ್ ರಾಜ್, ರಾಮಚಂದ್ರ ಕರ್ಕೇರ, ಶ್ರೀನಿವಾಸ, ರಾಜೇಶ್ ಅಮೀನ್ ಮತ್ತು ಶಾಲಾ ನಿರ್ದೇಶಕರಾದ ಐತಪ್ಪ ಪೂಜಾರಿ, ಆರತಿ ಅಮೀನ್ ಉಪಸ್ಥಿತರಿದ್ದರು.
