ಸುದ್ದಿ9 ಕಿನ್ನಿಗೋಳಿ; ಸ್ವಸಹಾಯ ಸಂಘಗಳಲ್ಲಿ ಸ್ವಾವಲಂಬನೆಯ ಬದುಕು ಕಟ್ಟುವ ಕಾಯಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಬಳ್ಕುಂಜೆ ಸಂತ ಪೌಲರ ಚರ್ಚ್ ಧರ್ಮಗುರು ಫಾ| ಮೈಕಲ್ ಡಿಸಿಲ್ವಾ ಹೇಳಿದರು. ಭಾನುವಾರ ಬಳ್ಕುಂಜೆ ಸಂತ ಪೌಲರ ದೇವಾಲಯದ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಹಾಲು ಉತ್ಪಾದಕರ ಸಹಕಾರಿ ಸಂಘ ಬಳ್ಕುಂಜೆ, ಗ್ರಾಮ ಪಂಚಾಯಿತಿ ಬಳ್ಕುಂಜೆ , ಸಂತ ಪೌಲರ ಚರ್ಚ್ , ವಿಠೋಬ ರಖುಮಾಯಿ ಭಜನಾ ಮಂದಿರ ಬಳ್ಕುಂಜೆ, ಕೊಲ್ಲೂರು, ಕವತ್ತಾರು ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ವಿಚಾರ ಸಂಕಿರಣ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಾಲ ಪ್ರತಿಭೆಗಳಾದ ನವನೀತ್ ಕೊಲ್ಲೂರು, ಚಾಮಿಕ ಕನ್ನಿಕಾ ಗೌಡ, ಕ್ಯಾರೋಲಿನ್ ಕ್ರಿಸ್ತ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೋ ಬಳ್ಕುಂಜೆ, ಬಳ್ಕುಂಜೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮಮತಾ ಪೂಂಜಾ, ದಯಾನಂದ ಶೆಟ್ಟಿ, ಧ. ಗ್ರಾ. ಯೋ. ಯೋಜನಾಧಿಕಾರಿ ರಾಘವ ಎಂ, ಕೃಷಿ ಅಧಿಕಾರಿ ಜನಾರ್ದನ ಎಂ, ಉಪಸ್ಥಿತರಿದ್ದರು. ಪಶುವೈದ್ಯಾಧಿಕಾರಿ ಡಾ| ಮನೋಹರ್, ಕೃಷಿ ಇಲಾಖೆಯ ನಾಗರಾಜ್ ಎಚ್, ತೋಟಗಾರಿಕೆ ಇಲಾಖೆಯ ಜಾನಕಿ, ಬಿ.ಬಿ.ಹೆಗ್ಡೆ, ಗಿರೀಶ್ ಕಂದೇಲು ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಬಳ್ಕುಂಜೆ ಒಕ್ಕೂಟದ ಸ್ವ-ಸಹಾಯ ಸಂಘಗಳ ಅಧ್ಯಕ್ಷ ಮೋಹನ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಜಯಲಕ್ಷ್ಮೀ ವರದಿ ವಾಚಿಸಿದರು. ರಶ್ಮಿ ವಂದಿಸಿದರು. ಮೇಲ್ವಿಚಾರಕ ಸತೀಶ್, ಎಲ್ಲಪ್ಪ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಕ್ಯಾಪ್ಶನ್ : ಬಾಲ ಪ್ರತಿಭೆಗಳಾದ ನವನೀತ್ ಕೊಲ್ಲೂರು, ಚಾಮಿಕ ಕನ್ನಿಕಾ ಗೌಡ, ಕ್ಯಾರೋಲಿನ್ ಕ್ರಿಸ್ತ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

