ಬಂಟ್ವಾಳ:ಬಂಟ್ವಾಳ ಪುರಸಬಾ ವ್ಯಾಪ್ತಿಯಲ್ಲಿ ಕೆಲವೊಂದು ಪ್ರಭಾವಿ ವ್ಯಕ್ತಿಗಳು ಒಂದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಕುಡಿಯುವ ನೀರು ಸಂಪರ್ಕ ಪಡೆದಿದ್ದರೂ ಅವರಿಗೆ ನೋಟೀಸು ಜಾರಿಗೊಳಿಸುವಲ್ಲಿ ಪುರಸಭೆ ವಿಫಲವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು ಆರೋಪಿಸಿದ್ದಾರೆ.


ಬಂಟ್ವಾಳ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಅವರು ಮಾತನಾಡಿದರು.
ಅನಧಿಕೃತ ನಳ್ಳಿ ಸಂಪರ್ಕ ಪಡೆದಿರುವವರಿಗೆ ಈಗಾಗಲೇ ನೋಟೀಸು ಜಾರಿಗೊಳಿಸಲಾಗಿದ್ದು, ಅಂತಹವರ ವಿರುದ್ಧ ಶೀಘ್ರವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದರು.
ಇದೇ ವೇಳೆ ಬಿಜೆಪಿ ಸದಸ್ಯ ಬಿ.ದೇವದಾಸ ಶೆಟ್ಟಿ ಸಹಿತ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರಾದ ವಾಸು ಪೂಜಾರಿ, ಸದಾಶಿವ ಬಂಗೇರ ಹಾಗೂ ಪಕ್ಷೇತರ ಸದಸ್ಯ ಬಿ. ಮೋಹನ್ ಅವರು ಪ್ರತಿಕ್ರಿಯಿಸಿ, ಇಂತಹ ಅನಧಿಕೃತ ಚಟುವಟಿಕೆ ಸಮರ್ಥನೀಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೂ 50.43 ಲಕ್ಷ ಮಿಗತೆ ಬಜೆಟ್:
ಆರಂಭಿಕ ಶಿಲ್ಕು ರೂ 6.28 ಕೋಟಿ ಸೇರಿದಂತೆ ಕಳೆದ ವರ್ಷದ ಜಮೆ ರೂ 27.75 ಕೋಟಿ ಹಾಗೂ ರೂ 33.54 ಕೋಟಿ ಮೊತ್ತದ ಖಚರ್ು ಸೇರಿ ಒಟ್ಟು ರೂ 50.43 ಲಕ್ಷ ಮೊತ್ತದ ಮಿಗತೆ ಬಜೆಟ್ ಮಂಡಿಸಿದರು.
ಉಪಾಧ್ಯಕ್ಷೆ ಯಾಸ್ಮಿನ್, ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್, ಜಗದೀಶ್ ಕುಂದರ್, ಪ್ರವೀಣ್ ಜಕ್ರಿಬೆಟ್ಟು ಮತ್ತಿತರರು ಚಚರ್ೆಯಲ್ಲಿ ಪಾಲ್ಗೊಂಡರು. ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪ್ರಭಾದೇವಿ ಮತ್ತಿತರರು ಇದ್ದರು.

