ಇತ್ತೀಚೆಗೆ ಸರಕಾರಿ ಪ್ರಥಮದರ್ಜೆ ಕಾಲೇಜು ವಾಮದಪದವು ಇಲ್ಲಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಸಣ್ಣ ಕಥಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದಡಾ.ಸುಬ್ರಹ್ಮಣ್ಯ.ಕೆಅವರು ನಿರೂಪಣೆಯನ್ನು ಮಾಡಿದರು. ಕಾಲೇಜಿನಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಟಿ.ಕೆ.ಶರತ್ ಕುಮಾರ್ ರ್ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಈ ಕಾರ್ಯಕ್ರಮದ ಉಪನ್ಯಾಸಕರಾಗಿ ಡಾ.ರಾಜಶೇಖರ್ ಹಳಿಮನಿ ಮುಖ್ಯಸ್ಥರು ಕನ್ನಡ ವಿಭಾಗ .ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇವರು ಕಥೆ ಕಟ್ಟುವ ಬಗೆ ಹಾಗೂ ಸಣ್ಣಕಥೆಗಳ ಸ್ವರೂಪದಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಅಷ್ಟೇ ಅಲ್ಲದೆ, ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯಕಾಲಘಟ್ಟದಲ್ಲಿ ಹುಟ್ಟಿಕೊಂಡ ಸಣ್ಣಕಥೆಗಳ ಸ್ವರೂಪದಕುರಿತು ಮಾಹಿತಿ ನೀಡಿದರು.ಕೊನೆಗೆ ಪ್ರಶ್ನೋತ್ತರ ಚರ್ಚೆ ನಡೆದುಡಾ.ಸುಬ್ರಹ್ಮಣ್ಯ.ಕೆ ಇವರ ಧನ್ಯವಾದದೊಂದಿಗೆಕಾರ್ಯಕ್ರಮ ಮುಕ್ತಾಯಗೊಂಡಿತು.


