ಬಂಟ್ವಾಳ,ಮಾ.13: ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಸಂಚಾರ ಅಡಚಣೆಗೆ ಮುಖ್ಯ ಕಾರಣವಾಗಿದ್ದ ಇಲ್ಲಿನ ರೈಲ್ವೆ ಮೇಲ್ಸೆತುವೆಯ ಕಾಮಗಾರಿ ಮಾರ್ಚ್  ಅಂತ್ಯದೊಳಗೆ ಮುಗಿಸುವುದಾಗಿ ಹೇಳಿದ್ದರೂ ಮತ್ತೂ ಎರಡು ತಿಂಗಳು ಮುಂದಕ್ಕೆ ಹೋಗಿ ಮೇ ಅಂತ್ಯಕ್ಕೆ ಮುಗಿಯಬಹುದು ಎನ್ನುವ ವಿವರಗಳು ಲಭ್ಯವಾಗಿದೆ.
ಬಿ.ಸಿ.ರೋಡಿಗೆ ದ. ಕ.ಜಿಲ್ಲಾಕಾರಿಗಳು ಕರ್ತವ್ಯ ನಿಮಿತ್ತ ಬಂದಿದ್ದಾಗ ಪತ್ರಕರ್ತರು ಅವರಲ್ಲಿ ಬಿ.ಸಿ.ರೋಡ್ ಸಂಚಾರ ಅಡಚಣೆಯ ಮುಖ್ಯ ವಿಚಾರವನ್ನು ಅವರ ಗಮನಕ್ಕೆ ತಂದಿದ್ದರು.
ನಿರ್ಮಾಣ ಹಂತದ ಬಿ.ಸಿ.ರೋಡ್ ಮೇಲ್ಸೇತುವೆ ಮಾರ್ಚ್  ಅಂತ್ಯಕ್ಕೆ ಕಾಮಗಾರಿ ಮುಗಿಸುವುದಾಗಿ ಜಿಲ್ಲಾಕಾರಿ ರಾ.ಹೆ. ಪ್ರಾಕಾರಿ ಅಕಾರಿಗಳು ಆ ಸಂದರ್ಭದಲ್ಲಿ ಹೇಳಿದ್ದರು.
ಹೆದ್ದಾರಿ ಮೇಲ್ಸೆತುವೆಯ ಸೆಂಟ್ರಿಂಗ್ ಕೆಲಸ ಮುಗಿಯುತ್ತಾ ಬಂದಿದೆ. ಅದಕ್ಕೆ ಇನ್ನಷ್ಟೆ ಸಿಮೆಂಟ್ ಪ್ಲಾಸ್ಟರ್ ಆಗಬೇಕು. ಅದಾಗಿ ಮುಂದಿನ 25ದಿನಗಳ ನೀರು ನಿರ್ವಹಣೆ ಮೂಲಕ ಅಂತಿಮ ಹಂತದ ಕೆಲಸಗಳು ಆಗಬೇಕು.

4 (3)

20-5

20-6

20-7

20-8
ಇದರ ಬಳಿಕ ಗರ್ಡರ್ ಜೋಡಣೆ ಮಾಡಬೇಕು. ಅದರ ನಂತರ ರಸ್ತೆಯ ಇಕ್ಕಡೆಯ ಮಣ್ಣಿನ ಸಂಪರ್ಕವನ್ನು ಸಮಾಂತರ ಎತ್ತರಕ್ಕೆ ಜೋಡಿಸುವ ಕೆಲಸಗಳು ಕೇವಲ ಮುಂದಿನ 60 ದಿನಗಳಲ್ಲಿ ಮುಗಿಯುತ್ತದೆ ಎನ್ನುವುದು ಪ್ರಸ್ತುತ ಸ್ಥಿತಿಯಲ್ಲಿ ಹೇಳುವುದು ಸಾಧ್ಯವಿಲ್ಲ.
ಇದೇ ವಿಚಾರವನ್ನು ಕಳೆದ ವಾರ ಬಿ.ಸಿ.ರೋಡಿಗೆ ಬಂದಿದ್ದ ಜಿಲ್ಲಾಕಾರಿಗಳಲ್ಲಿ ಪ್ರಸ್ತಾಪಿಸಿದಾಗ. ಇದೇನು ನಿರ್ದಿಷ್ಟ ಅವದಿಯಲ್ಲಿ ಮುಗಿಯುತ್ತದೆ ಎಂದು ಪ್ರಸ್ತುತ ಸ್ಥಿತಿಯನ್ನು ಕಾಣುವಾಗ ನಿಮಗನಿಸುತ್ತದೆಯೇ ಎಂದು ಜಿಲ್ಲಾಕಾರಿ ಅವರು ಪತ್ರಕರ್ತರಲ್ಲಿಯೇ ಪ್ರಶ್ನಿಸಿದ್ದರು.
ಇಲ್ಲಿನ ಹಳೆಯ ಮೇಲ್ಸೇತುವೆ ಯಾವದೇ ಸಂದರ್ಭದಲ್ಲಿ ಕುಸಿದು ಬೀಳಲು ಸಿದ್ದ ಎನ್ನುವಂತೆ ಸಮಯಕ್ಕೆ ಕಾಯುವಂತಿದೆ. ಬರುವ ಮಳೆಗಾಲದ ನೆವನದಲ್ಲಿ ಬಿದ್ದರೂ ಬೀಳಬಹುದು ಎಂಬುದಾಗಿ ಕೆಲವರು ಅಭಿಪ್ರಾಯ ಪಡುತ್ತಾರೆ.
ಹಲವು ಅಪಘಾಗಳಿಗೆ ಕಾರಣವಾಗಿರುವ ಈ ಹಳೆಯ ಸೇತುವೆಯ ಫುಟ್ಪಾತ್ನಲ್ಲಿ ರಂಧ್ರವೊಂದು ನಿರ್ಮಾಣವಾಗಿದ್ದು ನಡೆದು ಹೋಗುವ ಒಬ್ಬ ಬಾಲಕ, ಇಬ್ಬರು ಹಿರಿಯ ವ್ಯಕ್ತಿಗಳು, ಎರಡು ಹೋರಿಗಳು ಇಲ್ಲಿಂದ ಬಿದ್ದು ಅಂಗವೂನ ಮಾಡಿಕೊಂಡ ಘಟನೆಗಳನ್ನು ಸ್ಮರಿಸಬಹುದು.
ಪ್ರಸ್ತುತ ಫ್ಲೈಒವರ್ಗೆ ಪುತ್ತೂರು ಕಡೆಯಿಂದ ಬರುವ ವಾಹನಗಳು ಭರ್ರೆಂದು ಹೋಗಿ ಅಧ್ವಾನ ಸೃಷ್ಟಿಸುತ್ತಿದೆ. ಮೇಲ್ಸೆತುವೆ ಆದ ಬಳಿಕ ಸರಿಯಾದ ಮಾರ್ಗಸೂಚಿ ಇಲ್ಲದಿದ್ದರು ಹೆದ್ದಾರಿ ಅವಘಡಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿ ಅಪಘಾತಗಳು ಸಂಭವಿಸಬಹುದು ಎನ್ನುವುದು ಯಾವುದೇ ಇಂಜಿನಿಯರಿಂಗ್ ಪದವಿ ಇಲ್ಲದವರು ಕೂಡಾ ಹೇಳಬಹುದು.
ಅದೇನಿದ್ದರೂ ಪ್ರಗತಿಯ ದ್ಯೋತಕವಾದ ಬಿ.ಸಿ. ರೋಡ್ ಚತುಷ್ಪಥಕ್ಕೆ ಎಲ್ಲು ನೀರನ್ನು ಬಿಟ್ಟಿರುವ ಫ್ಲೈಒವರ್  ರಸ್ತೆಯ ದುಸ್ಥಿತಿಗೆ ಮತ್ತು ನಿರಂತರ ಟೀಕೆಗೆ ಒಳಗಾಗಿರುವ ಸಂಚಾರ ಆಡಚಣೆಗೆ ಯಾವ ಇಂಜಿನಿಯರಿಂಗ್ ತಂತ್ರಜ್ಞರು ಕಾರಣ ಎಂಬುದನ್ನು ಯಾವುದಾದರು ಸಾಮಾಜಿಕ ಸಂಘಟನೆಗಳು ಪ್ರಶ್ನಿಸಿದರೆ ಹೊಣೆಗಾರಿ ಅಕಾರಿಗಳು ಮುಂದಿನ ಹಂತದಲ್ಲಿಯಾದರೂ ಎಚ್ಚೆತ್ತುಕೊಳ್ಳಬಹುದು

By Suddi9

Leave a Reply

Your email address will not be published. Required fields are marked *