ಬಜಪೆ: ಬಜಪೆಯ ಸ್ವಾಮಿಲಪದವಿನಲ್ಲಿ ನಿರ್ಮಾಣಗೊಂಡಿರುವ ರೋಟರಿ ಕ್ಲಬ್ ಬಜಪೆ ಇದರ ನೂತನ ಸುಸಜ್ಜಿತ ರೋಟರಿ ಭವನವನ್ನು ಮಾ.15 ಭಾನುವಾರದಂದು ಜಿಲ್ಲಾ ರೋಟರಿ ಗವರ್ನರ್ ಡಾ| ಭಾಸ್ಕರ್.ಎಸ್ ಅವರು ಉದ್ಘಾಟಿಸಿ ಮಾತಾಡಿ ಅವರು ರೋಟರಿಯು ಜಗತ್ತಿನಲ್ಲಿ ಬದಲಾವಣೆಯ ಪ್ರಾರಂಭವನ್ನು ಮಾಡುದಾಗಿ ಖಂಡಿತವಾಗಿಯೂ ಹೇಳಬಹುದು ಏಕೆಂದರೆ ರೋಟರಿಯಲ್ಲಿ ಸೇವಾ ಮನೋಭವ ಇದೆ ಉತ್ತಮ ಕಾರ್ಯಗಳನ್ನು ರೋಟರಿಯು ಮಾಡುತ್ತ ಬಂದಿದೆ.ರೋಟರಿ ಸ್ವಚ್ಛಭಾರತದ ಅಭಿಯಾನದಲ್ಲಿ ತೊಡಗಿಸಿಕೊಂಡು ಸ್ವಚ್ಛತೆಯನ್ನು ಕಾಪಡಿಕೊಂಡು ಬಂದಿದೆ ಈ ಪರಿಸರದಲ್ಲಿ ಕೂಡ ಸೇವಾ ಕಾರ್ಯವನ್ನು ನಾವೆಲ್ಲ ಒಟ್ಟಾಗಿ ಸೇರಿ ಮಾಡೋಣ ಮತ್ತು ಈ ಭವನವು ಪರಿಸರದ ಜನರ ಕಷ್ಟ ಮತ್ತು ನೊಂದವರಿಗೆ ಸಹಾಯ ಮಾಡಲು ಸಹಕಾರಿಯಾಗಲಿ ಎಂದರು.
DSC_0509

DSC_0512

DSC_0517

DSC_0523

DSC_0527

DSC_0530

DSC_0534

DSC_0536

DSC_0538

DSC_0545

DSC_0548

DSC_0554

DSC_0564

DSC_0567
ನೂತನ ರೋಟರಿ ಭವನಕ್ಕೆ ಸ್ಥಳದಾನ ಮಾಡಿದ ರೊ. ಸುಕುಮಾರ್ ಸಾಲ್ಯಾನ್ ಮಾತಾಡಿ ಜಗತ್ತಿಗೆ ರೋಟರಿಯಿಂದ ಬಹಳಷ್ಟು ಸಮಾಜಸೇವೆ ಕೆಲಸಗಳು ಆಗಿವೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ನಾಗೇಂದ್ರ ಕ್ಲಬ್ ನ ಸ್ಮರಣಸಂಚಿಕೆ “ಪ್ರತಿಬಿಂಬ”ವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಭವನಕ್ಕೆ ಸ್ಥಳದಾನ ನೀಡಿದ ರೋ| ಎಂಜೆಎಫ್ ಸುಕುಮಾರ್ ಸಾಲ್ಯಾನ್ ಮತ್ತು ಯಶೋದ ಎಸ್.ಸಾಲ್ಯಾನ್ , ಗುತ್ತಿಗೆದಾರ ಲಿಗೋರಿ ಪಿಂಟೋ, ವಂದನ್ ಪಿಂಟೋ, ರೋಟರಿ ಕ್ಲಬ್ ನ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ ಬಜಪೆ ಸಂತ ಜೋಸೆಪ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬ್ರ.ಹೆಕ್ಟರ್ ಪಿಂಟೋ, ರೋಟರಿ ಕ್ಲಬ್ ಬಜಪೆ ಇದರ ಅಧ್ಯಕ್ಷರಾದ ರೊ| ರೋಬರ್ಟ್ ಫ್ರಾಂಕ್ಲಿನ್ ರೇಗೋ, ಯುವಉದ್ಯಮಿ ರೊ| ರವಿ ಪೂಜಾರಿ, ಇವರನ್ನು ಸಮಾರಂಭದಲ್ಲಿ ಸಮ್ಮನಿಸಲಾಯಿತು.ಮುಖ್ಯ ಅತಿಥಿಯಾಗಿ ಜಿಲ್ಲಾ ರೋಟರಿಕೌನ್ಸಿಲರ್ ಸೂರ್ಯಪ್ರಕಾಶ್ ಭಟ್ , ಬಜಪೆ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ರೊ| ಮಾಧವ ಅಮೀನ್, ಝೋನಲ್ ಲೆಪ್ಟಿನೆಂಟ್ ರೊ| ಶರತ್ ಶೆಟ್ಟಿ ಉಪಸ್ಥಿರಿದ್ದರು. ರೋಟರಿ ಕ್ಲಬ್‍ನ ಅಧ್ಯಕ್ಷ ರೊ| ರೋಬರ್ಟ್ ಫ್ರಾಂಕ್ಲಿನ್ ರೇಗೋ ಸ್ವಾಗತಿಸಿದರು, ರೊ| ಜ್ಯೂಲಿಯೆಟ್ ಮೋರಾಸ್ ಮತ್ತು ರೊ| ಶಾರನ್ ಫೆರ್ನಾಂಡಿಸ್ ಪ್ರಾರ್ಥಿಸಿದರು, ರೊ| ಗೋಪಿನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ರೊ| ಚಂದ್ರಶೇಖರ್ ಎಸ್.ಪೂಜಾರಿ ವಂದಿಸಿದರು

By suddi9

Leave a Reply

Your email address will not be published. Required fields are marked *