ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರಾ ಮಹೋತ್ಸವ ಶನಿವಾರ ವಿಜ್ರಂಭಣೆಯಿಂದ ಜರಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ದೇವರ ಬಲಿ ಉತ್ಸವದಲ್ಲಿ ಅರಣ್ಯ ಸಚಿವ ರಮಾನಾಥ ರೈ ಆಗಮಿಸಿ ಪ್ರಸಾದ ಸ್ವೀಕರಿಸಿ ಉತ್ಸವದಲ್ಲಿ ಪಾಲ್ಗೋಡಿದ್ದರು.

ದೇವಳದ ಆಡಳಿತ ಮೋಕ್ತೇಸರ ರಘು ಎಲ್ ಶೆಟ್ಟಿ, ಬಿ ರಘುರಾಮ ಭಟ್, ವರಕೋಡಿ ಗೋಪಾಲಕೃಷ್ಣ ಪಿ ಶೆಟ್ಟಿ, ಕೊಪ್ಪಲ ಗಂಗಾಧರ ಪೂಜಾರಿ, ಮೇಗಿನ ಮನೆ ಕೆ.ಬಾರಿ ಭಂಡಾರಿ, ಪರಾರಿ ಸಂತೋಷ್ ಕುಮಾರ್ ರೈ, ಪರಿಮೊಗರು ಸವಿತಾ ಎನ್ ಶೆಟ್ಟಿ , ಕೋಡಿ ವೀಣಾ ಎಲ್ ಭಟ್, ಭಾಗಿ ಉಸ್ಥಿತರಿದ್ದರು. ಹಾಗೂ ಗುತ್ತಿನವರು ಮತ್ತು ಊರ ಹತ್ತು ಸಮಸ್ತರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೋಂಡಿದ್ದರು. ನಂತರ ದೇವರ ಬಲಿ ಉತ್ಸವ ನಡೆಯಿತು.











