ಬಜ್ಪೆ: ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮನೆಗೆ ನಷ್ಟ ಉಂಟು ಮಾಡಿದ ಬಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ದೇವರಗುಡ್ಡೆ ಎಂಬಲ್ಲಿ ಇತ್ತೀಚೆಗೆ ನಡೆದಿದೆ.
ದೇವರಾಜ್ ಹಾಗೂ ಅವರ ಪತ್ನಿ ಲಲಿತಾ ಮನೆಯಲ್ಲೇ ಇದ್ದ ಸಂದರ್ಭ ಕ್ಷುಲಕ ಕಾರಣಕ್ಕಾಗಿ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ ಮೀನಾಕ್ಷಿ, ಸದಾಶಿವ, ಚಂದ್ರಾವತಿ, ಬ್ರಹಸ್ಪತಿ ಮತ್ತು ಹರಿಣಾಕ್ಷಿ ಮನೆಯ ಬಾಗಿಲನ್ನು ಪಿಕ್ಕಾಸಿನಿಂದ ಮುರಿದು, ಅವಾಚ್ಯವಾಗಿ ನಿಂದಿಸಿ, ಕೈಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಶಾಂತಿಯುತವಾಗಿ ನಿಮ್ಮನ್ನು ಜೀವನ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
