ಕೈಕಂಬ: ಬೈಕ್ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರರೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ಗಂಜಿಮಠ ಸಮೀಪದ ಮಳಲಿ ಕ್ರಾಸ್ ಎಂಬಲ್ಲಿ ಫೆ.24ರಂದು ನಡೆದಿದೆ. ವಸಂತ ಪೂಜಾರಿ ಎನ್ನುವವರು ಗಾಯಗೊಂಡ ವ್ಯಕ್ತಿ.

ಇವರು ಮಳಲಿ ಕ್ರಾಸ್ನಿಂದ ಗಂಜಿಮಠ ಪೇಟೆಗೆ ತನ್ನ ಪಲ್ಸರ್ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಬೈಕ್ ಸವಾರನು ತನ್ನ ವಾಹನವನ್ನು ನಿರ್ಲಕ್ಷ್ಯದಿಂದ ಹಾಗೂ ಅತಿವೇಗ ವಾಗಿ ಚಲಾಯಿಸಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ವಸಂತ ಪೂಜಾರಿಯವರ ತಲೆಗೆ ಗಂಭೀರವಾದ ಗಾಯವಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅವರ ತಮ್ಮ ಶೇಖರ ಪೂಜಾರಿ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ

By suddi9

Leave a Reply

Your email address will not be published. Required fields are marked *