ಬಂಟ್ವಾಳ ತಾಲ್ಲೂಕಿನ ಒಡಿಯೂರು ಗುರುದೇವ ಗ್ರಾಮ ವಿಕಾಸ ಯೋಜನೆ ವತಿಯಿಂದ ಬೋಳಂತೂರು ಎಂಬಲ್ಲಿ ಸೋಮವಾರ ಏರ್ಪಡಿಸಿದ್ದ ಸತ್ಯದತ್ತ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯಕ್ ಮಾತನಾಡಿದರು. ಗುರುದೇವಾನಂದ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ರೈ, ತಾ.ಪಂ.ಸದಸ್ ಮಾಧವ ಎಸ್.ಮಾವೆ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಚಂದ್ರಹಾಸ ರೈಬೋಳಂತೂರು ಮತ್ತಿತರರು ಇದ್ದರು. 
