ಬಂಟ್ವಾಳ:ತಾಲ್ಲೂಕಿನ ಕಕ್ಯಪದವು ಸಮೀಪದ ಉಳಿ ಗ್ರಾಮ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ವತಿಯಿಂದ 3ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ಇದೇ 28ರಂದು ಬೆಳಿಗ್ಗೆ ಇಲ್ಲಿನ ಮೈರ-ಬರ್ಕ ಜಾಲು ಎಂಬಲ್ಲಿ ನಿರ್ಮಿಸಿದ ಆಕರ್ಷಕ ಕರೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಮುಕಂಡ ಕೆ.ಹರೀಶ್ಚಂದ್ರ ಪೂಜಾರಿ ಹೇಳಿದ್ದಾರೆ.
ಕಳೆದ ವರ್ಷ ನಡೆದ ‘ಸತ್ಯ-ಧರ್ಮ’ ಕಂಬಳದಲ್ಲಿ ಓಟದ ಕೋಣಗಳ ಆಕರ್ಷಕ ದೃಶ್ಯ.

ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಅಂದು ಬೆಳಿಗ್ಗೆ ಕಕ್ಯಪದವು ದೇವಸ್ಥಾನದಿಂದ ಬರ್ಕ ಜಾಲು ತನಕ ಓಟದ ಕೋಣಗಳ ಆಕರ್ಷಕ ಮೆರವಣಿಗೆ ನಡೆಯಲಿದ್ದು, ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಲು ಮೆರವಣಿಗೆ ಉದ್ಘಾಟಿಸುವರು. ಪಿಡಬ್ಲ್ಯುಡಿ ಗುತ್ತಿಗೆದಾರ ಸಾಮ್ರಾಟ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ಪ್ರಶಾಂತ್ ಪುಂಜಾಲಕಟ್ಟೆ ಕಂಬಳ ಉದ್ಘಾಟಿಸುವರು. ಸರಪಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾರಿಂಜ ಕೊಡಂಬೆಟ್ಟು ರಾಘವೇಂದ್ರ ಭಟ್, ವಿನಯಶಾಂತಿ ಪಟ್ಲಕೆರೆ, ಕಕ್ಯಪದವು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಅಮಡ್ತಾಯ, ಸ್ಥಳದಾನಿ ತುಕ್ರಪ್ಪ ಗೌಡ ಮತ್ತಿತರ ಗಣ್ಯರು ಭಾಗವಹಿಸುವರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧ್ಯಕ್ಷತೆ ವಹಿಸಲಿದ್ದು, ಅರಣ್ಯ ಸಚಿವ ಬಿ.ರಮಾನಾಥ ರೈ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ, ಮಂಗಳೂರು ಬಿಜೆಪಿ ಕಾರ್ಯದರ್ಶಿ ಡಾ.ಭರತ್ ರಾಜ್ ಶೆಟ್ಟಿ, ಮಂಗಳೂರು ಉದ್ಯಮಿ ಮಾಧವ ಎ.ಆರ್., ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ರಾಜ್ಯ ಬಿಜೆಪಿ ಯುವ ಮೋಚರ್ಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾರಾಯಣ ಶಾಂತಿ ಪಟ್ಲಕೆರೆ, ಕಂಬಳ ತೀಪರ್ುಗಾರ ಎಂ.ರಾಜೀವ ಶೆಟ್ಟಿ ಎಡ್ತೂರು, ಜೆಸಿಐ ರಾಷ್ಟ್ರೀಯ ಪ್ರಶಸ್ತಿ ವಿಜೇತ ರವಿ ಕಕ್ಯಪದವು ಇವರಿಗೆ ಅಭಿನಂದನೆ ಮತ್ತು ಕಂಬಳ ಕ್ಷೇತ್ರ ಸಾಧಕ ಸುಂದರ ಕೆ.ಆಚಾರ್ಯ, ಜಾನಪದ ಕ್ಷೇತ್ರ ಸಾಧಕ ಜಾರಪ್ಪ ಪೂಜಾರಿ ಇವರಿಗೆ ಸಮ್ಮಾನ ನಡೆಯಲಿದೆ ಎಂದರು.
ವೇದಮೂರ್ತಿ ರಾಘವೇಂದ್ರ ಭಟ್ ಕಾರಿಂಜ, ಸಮಿತಿ ಗೌರವಾಧ್ಯಕ್ಷ ಕೃಷಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸಾಯಿಗಿರಿಧರ ಶೆಟ್ಟಿ ನಡುಮೊಗರುಗುತ್ತು, ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ರಾಜ್ಯ ಬಿಜೆಪಿ ಯುವಮೋಚರ್ಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಮತ್ತಿತರ ನೇತೃತ್ವದಲ್ಲಿ ಕಳೆದ ಎರಡು ವಷ್ಗಳ ಹಿಂದೆ ಕಂಬಳ ಆರಂಭಗೊಂಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ರಂಜಿತ್ ಮೈರ, ಪ್ರಧಾನ ಸಂಚಾಲಕ ಹರೀಶ್ ಕುಮಾರ್ ಕಕ್ಯ , ಕಂಬಳ ಪ್ರಧಾನ ತೀಪರ್ುಗಾರ ಎಂ.ರಾಜೀವ ಶೆಟ್ಟಿ ಎಡ್ತೂರು ಉಪಸ್ಥಿತರಿದ್ದರು.
—
