ದೆಹಲಿ: ಭಾರತಕ್ಕೆ ಬಂದು ಹಣ ಹೆಸರು ಗಳಿಸಿ ಪಾಕಿಸ್ತಾನಕ್ಕೆ ಮರಳಿ ದುಬೈಯ ಮಿಲಿಯಾಧಿಪತಿಯನ್ನು ಬುಟ್ಟಿಗೆ ಹಾಕಿ ಮಜಾ ಉಡಾಯಿಸುತ್ತಿರುವ ಪಾಕಿಸ್ತಾನದ ಸಿ ಗ್ರೇಡ್ ಸಿನಿಮಾಗಳ ನಟಿ ವೀಣಾ ಮಲಿಕ್ ಭಾರತದ ವಿರುದ್ಧ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಪ್ರಕಟಿಸಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಮದುವೆಯ ನಂತರ ದೇಶವಿದೇಶ ಸುತ್ಕೆತಾಡಿ ಬಂದಿರುವ ವೀಣಾ ಕೆಲವು ದಿನಗಳ ಹಿಂದೆ ಟ್ವಿಟರ್ ನಲ್ಲಿ ‘ಇಂಡಿಯಾ ಸಕ್ಸ್’ ಎಂಬ ಕಾಮೆಂಟ್ ಹಾಕಿದ್ದಳು. ಆಕೆಯ ೀ ಕಾಮೆಂಟ್ ಗೆ ಆಕ್ರೋಶ ವ್ಯಕ್ತಪಡಿಸಿರುವ ಟ್ವಿಟ್ಟಿಗರು ತರಹೇವಾರಿಯಾಗಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ಅವಳಂಥ ಸಿ ಗ್ರೇಡ್ ನಟಿಯನ್ನು ಪಾಕಿಸ್ತಾನದಲ್ಲಿ ಯಾರೂ ಕ್ಯಾರೇ ಅನ್ನುವುದಿಲ್ಲ ಆದರೆ ಭಾರತದ ಚಿತ್ರರಂಗ ಆಕೆಯನ್ನು ಮಹಾನ್ ನಟಿಯೆಂಬಂತೆ ಹಲವು ಚಿತ್ರಗಳಲ್ಲಿ ಅವಕಾಶ ನೀಡಿರುವ ಬಗ್ಗೆ ಅನೇಕರು ಕಿಡಿಕಾರಿದ್ದಾರೆ. ಭಾರತದಲ್ಲಿ ಗಳಿಸಿದ ಹಣ ಮತ್ತು ಜನಪ್ರಿಯತೆಯ ಆಧಾರದಲ್ಲೇ ಆಕೆ ದುಬೈನ ಮಿಲಿಯಾಧಿಪತಿಯನ್ನು ವರಿಸಿದ್ದಳು.

Veena

ಆದರೆ ಹಣದ ಅಮಲು ತಲೆಗೇರುತ್ತಿದ್ದಂತೆ ತನ್ನ ನಿಜ ಬಣ್ಣ ಹೊರಹಾಕಿರುವ ವೀಣಾ ಸದ್ಯ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕನ್ನಡದಲ್ಲೂ ಸಿಲ್ಕ್ ಎಂಬ ಚಿತ್ರದಲ್ಲಿ ನಟಿಸಿರುವ ವೀಣಾ ಅದರಲ್ಲೂ ತೋರಿಸಬಾರದೆಲ್ಲವನ್ನೂ ತೋರಿಸಿ ಹಣ ಮಾಡಿದ್ದಳು. ಆದರೆ ಆ ಚಿತ್ರ ಕೂಡಾ ತೋಪೆದ್ದು ಆಕೆಯ ಮೈಸಿರಿಗೆ ಡಿಮ್ಯಾಂಡ್ ಕಡಿಮೆಯಾಗಿತ್ತು. ಆಕೆ ಈ ಪರಿ ಭಾರತಕ್ಕೆ ಬೈದಿದ್ದರೂ ಬಿಗ್ ಬಾಸ್ ನ ಮುಂದಿನ ಸಂಚಿಕೆಯಲ್ಲಿ ಆಕೆಯನ್ನು ಸ್ಪರ್ಧಿಯಾಗಿ ಕರೆತಂದರೂ ಅಚ್ಚರಿಯಿಲ್ಲ. ನಮ್ಮ ಭಾರತೀಯರು ಅಷ್ಟೊಂದು ವಿಶಾಲ ಹೃದಯದವರು ಎಂದು ಒಬ್ಬ ಟ್ವಿಟ್ಟಿಗ ಟ್ವೀಟ್ ಮಾಡಿದ್ದಾನೆ.

By suddi9

Leave a Reply

Your email address will not be published. Required fields are marked *