ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸೇತುವೆ ಸಮೀಪ ವ್ಯಕ್ತಿಯೋರ್ವರ ಭಯಾನಕ ಅಸ್ತಿಯೊಂದು ಸಿಕಿದ್ದು ವ್ಯಾಪಕ ಸಂಶಯಕ್ಕೆ ಕಾರಣವಾಗಿದೆ.

IMG-20150220-WA0061
ಈ ಅಸ್ತಿಪಂಜರ ಮುಂಬೈ ಮೂಲದ ರಾಂದಾಸ್ ಪೂಜಾರಿ(62) ಎಂಬವರದ್ದಾಗಿದ್ದು ಧರ್ಮಸ್ಥಳದಲ್ಲಿ ನಡೆದಿದ್ದ ಲಕ್ಷದೀಪೋತ್ಸವ ಬಂದಿದ್ದರು ಎನ್ನಲಾಗಿದೆ. ಲಕ್ಷದೀಪೋತ್ಸವಕ್ಕೆ ಬಂದಿದ್ದವರು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಹಣವೂ ಸಿಕ್ಕಿದೆ ಎಂದು ತಿಳಿದುಬಂದಿದೆ. ಇವರು ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಕೊಲೆಗೀಡಾದರೋ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.

By suddi9

Leave a Reply

Your email address will not be published. Required fields are marked *