ಶಿವಮೊಗ್ಗ: ಶಿವಮೊಗ್ಗದಲ್ಲಿ ಗುರುವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಮೆರವಣಿಗೆಯ ನಂತರ ನಡೆದ ಘರ್ಷಣೆಯಲ್ಲಿ ಶಿವಮೊಗ್ಗಾದ ಅಲ್ಕೋಳ ನಿವಾಸಿ ವಿಶ್ವನಾಥ್(35) ಎಂಬವರು ಕೊಲೆಗೀಡಾಗಿದ್ದರು. ಜೊತೆಗೆ ಇನ್ನೂ 7 ಮಂದಿ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

IMG-20150220-WA0002
ಈ ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಆದರೆ ಆರೋಪಿಗಳ ಗುಟ್ಟನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ. ಆರೆಸ್ಸೆಸ್ ವಿರುದ್ಧ ಹಾಗೂ ಪಾಕಿಸ್ತಾನದ ಪರವಾಗಿ ಪಿಎಫ್‍ಐ ಕಾರ್ಯಕರ್ತರು ಘೋಷಣೆ ಕೂಗಿದ್ದೇ ಈ ಘಟನೆಗೆ ಕಾರಣವೆನ್ನಲಾಗಿದೆ.
ಮೃತನ ಕುಟುಂಬಕ್ಕೆ ಶಿಕ್ಷಣ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕ್ ತಿಳಿಸಿದ್ದಾರೆ. ಫೆ.25ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಯಿಂದ ಶಿವಮೊಗ್ಗ ಸ್ತಭ್ದವಾಗಿದ್ದು, ಅಂಗಡಿ ಮುಂಗಟ್ಟು, ಶಾಲಾ ಕಾಲೇಜ್‍ಗಳು ಮುಚ್ಚಿದ್ದವು.

By suddi9

Leave a Reply

Your email address will not be published. Required fields are marked *