ಧರ್ಮಶಾಲಾ: ಪಾಕಿಸ್ತಾನದ ಲರ್ಕಾನಾ ಪ್ರದೇಶದಲ್ಲಿರುವ ಜಿನ್ನಾಬಾಗ್ ಚೌಕ್ ನಲ್ಲಿದ್ದ ಹಿಂದೂ ದೇವಾಲಯವೊಂದಕ್ಕೆ ಮತಾಂಧ ದುಷ್ಕರ್ಮಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಪವಿತ್ರ ಗ್ರಂಥದ ಕೆಲವು ಹಾಳೆಯನ್ನು ವ್ಯಕ್ತಿಯೊಬ್ಬ ಹರಿದು ಹಾಕಿದ್ದಾನೆ ಎಂದು ಆರೋಪಿಸಿರುವ ದುಷ್ಕರ್ಮಿಗಳ ತಂಡ ಬಳಿಕ ಆತನ ಮನೆಯ ಸುತ್ತ ಘೆರಾವ್ ಹಾಕಿತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಎಚ್ಚರಿಕೆಯಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಅಶ್ರುವಾಯು ಸಿಂಪಡಿಸಿದರು.

pak

ಪವಿತ್ರ ಪುಸ್ತಕದ ಹಾಳೆಗಳನ್ನು ನಾಶಗೈದಾತ ಮಾನಸಿಕ ಅಸ್ವಸ್ಥನಾಗಿದ್ದು ವಿಪರೀತ ಮಾದಕ ದ್ರವ್ಯ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ. ಆದರೆ ಇದ್ಯಾವುದನ್ನೂ ಪರಿಗಣಿಸದ ಉದ್ರಿಕ್ತ ಗುಂಪು ಹಿಂದೂ ಪ್ರಾರ್ಥನಾ ಮಂದಿರಕ್ಕೆ ಬೆಂಕಿಯಿಕ್ಕಿ ಆಕ್ರೋಶ ಮೆರೆದಿದ್ದಾರೆ. ಹೋಳಿ ಹಬ್ಬದ ದಿನದಂದೇ ಈ ಘಟನೆ ನಡೆದಿದ್ದು ಹಿಂದೂಗಳೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ.

By suddi9

Leave a Reply

Your email address will not be published. Required fields are marked *