sand replica
sand replica
sand replica

ಕರಾಚಿ: ಮಲೇಷ್ಯಾದ ಎಂಎಚ್370 ವಿಮಾನ ನಾಪತ್ತೆಯಾಗಿ 8 ದಿನಗಳು ಕಳೆದರೂ ಯಾವುದೇ ಸುಳಿವು ಸಿಗದಿರುವುದು ಹೊಸಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುತ್ತಿದೆ. ವಿಮಾನವು ರಾಡರ್ ದೃಷ್ಠಿಯಿಂದ ಕಣ್ಮರೆಯಾದ ನಂತರ ಹಲವು ಗಂಟೆಗಳ ಕಾಲ ಹಾರಾಟ ನಡೆಸಿರಬಹುದು ಎಂಬ ಅಧಿಕಾರಿಗಳ ವಾದ ಆ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂಬ ಶಂಕೆಯನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ಅಮೆರಿಕಾದ ಉಪಕಾರ್ಯದರ್ಶಿ ಸ್ಟ್ರೋಬ್ ಟಾಲ್ಬೊಟ್ ಎಂಎಚ್370 ವಿಮಾನವನ್ನು ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ಅಪಹರಣಗೈಯ್ಯಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿರುವುದು ಈ ಸಾಧ್ಯತೆಯನ್ನು ಮತ್ತಷ್ಟು ನಿಜಗೊಳಿಸುತ್ತದೆ. ಅಪಹೃತ ವಿಮಾನವನ್ನು ಪಾಕಿಸ್ತಾನ ಯಾವುದೋ ಗುಪ್ತ ಪ್ರದೇಶದಲ್ಲಿ ಅಡಗಿಸಿರಬಹುದು ಎಂಬ ಅಧಿಕಾರಿಗಳ ವಾದವನ್ನು ಪಾಕಿಸ್ತಾನ ಬಲವಾಗಿ ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿದ ಪಾಕ್ ಪ್ರಧಾನಿಯ ಆಪ್ತ ವೈಮಾನಿಕ ಸಲಹೆಗಾರ ಶೌಜಾತ್ ಅಝೀಮ್ ಪಾಕಿಸ್ತಾನದಲ್ಲಿ ಮಲೇಷ್ಯಾದ ವಿಮಾನ ಇರಲು ಸಾಧ್ಯವಿಲ್ಲ. ನಮ್ಮ ರಾಡರ್ಗಳಿಗೆ ಹೊರಗಿನಿಂದ ನಮ್ಮ ವಾಯುಪ್ರದೇಶಕ್ಕೆ ಬಂದಿರುವ ಯಾವುದೇ ವಿಮಾನದ ಸುಳಿವು ಪತ್ತೆಯಾಗಿಲ್ಲ, ಅದಲ್ಲದೆ ಎಂಎಚ್370 ಪಾಕಿಸ್ತಾನದಿಂದ ಬಹಳಷ್ಟು ದೂರದಲ್ಲಿ ಕಣ್ಮರೆಯಾಗಿದ್ದು ಇಲ್ಲಿಯವರೆಗೆ ತಲುಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *