ಉಳ್ಳಾಲ : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 2007-08ರ ಪದವಿ ವಿಭಾಗದ ಪರೀಕ್ಷೆಗಳಿಗೆ ಅಳವಡಿಸಲಾದ ಸಮ ಬೆಸ ಪದ್ಧತಿ ರದ್ದಿಗೆ ಆಗ್ರಹಿಸಿ ಶನಿವಾರ ಸ್ಟೂಡೆಂಟ್ಸ್ ಪೆಡರೇಶನ್ ಆಫ್ ಇಂಡಿಯಾ ವತಿಯಿಂದ ಕೊಣಾಜೆ ಮಂಗಳೂರು ವಿ.ವಿ ಆಡಳಿತ ಸೌಧಕ್ಕೆ ವಿ.ವಿ ಚಲೋ ಪ್ರತಿಭಟನಾ ಮೆರವಣಿಗೆ ನಡೆಯಿತು.

sfi (7)

sfi (6)

sfi (5)

sfi (4)

sfi (3)

sfi (2)

sfi (1)
ಕ್ರೆಡಿಟ್ ಬೇಸ್ಡ್ ಸೆಮಿಸ್ಟರ್ ಪದ್ದತಿಯಲ್ಲಿ ಸಮಬೆಸವೆನ್ನುವ ಪರೀಕ್ಷಾ ಕ್ರಮದಲ್ಲಿ ಒಬ್ಬ ವಿದ್ಯಾರ್ಥಿ ಮೊದಲ ಸೆಮಿಸ್ಟರ್ ನಲ್ಲಿ ಅನುತ್ತೀರ್ಣವಾದರೆ, ಆತನಿಗೆ ಆ ಪರೀಕ್ಷೆ ಬರೆಯಲು 3 ನೇ ಮತ್ತು 5 ನೇ ಸೆಮಿಸ್ಟರಿನಲ್ಲಿ ಮಾತ್ರ ಬರೆಯಲು ಅವಕಾಶ. ಇದು ಅವೈಜ್ಞಾನಿಕ ನಿಯಮವಾಗಿದ್ದು 5ನೇ ಸೆಮಿಸ್ಟರ್ ನಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿ 6ನೇ ಸೆಮಿಸ್ಟರಿನಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಅವರು ಮತ್ತೆ ಒಂದು ವರ್ಷ ಕಾಯಬೇಕಿದೆ. ಇದರಿಂದ ಅವರ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಸಮಬೆಸ ಪದ್ಧತಿಯಿಂದಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಭೆಗಳನ್ನು ಹೊರಹಾಕದೆ ಕಲಿಕೆಗೇ ಮಾತ್ರ ಹೆಚ್ಚಿನ ಒತ್ತು ನೀಡಬೇಕಾದ ವಿದ್ಯಾರ್ಥಿಗಳು ಎನ್.ಸಿ.ಸಿ , ಎನ್ ಎಸ್ ಎಸ್ ಗಳಲ್ಲಿಯೂ ಭಾಗವಹಿಸಲಾಗದೆ ಅದರಲ್ಲಿ ಸಿಗುವ ಅಂಕಗಳಿಂದಲೂ ವಂಚಿತರಾಗಿದ್ದಾರೆ. ಕೂಡಲೇ ಪರೀಕ್ಷಾ ಪದ್ದತಿಯನ್ನು ಕೈಬಿಟ್ಟು, ಯಾವುದೇ ಪರೀಕ್ಷೆಯ ವಿಷಯವನ್ನು ಯಾವುದೇ ಸೆಮಿಸ್ಟರಿನಲ್ಲಿ ಬರೆಯಲು ಅವಕಾಶ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಉಳ್ಳಾಲ ವಲಯ ಅಧ್ಯಕ್ಷ ಹಂಝ ಕಿನ್ಯಾ, ಅಶೀದ್, ಅಜಯ್, ಫರಾಜ್, ಪವನ್ ಬೋಳಾರ, ರಮೀಜ್ , ದೀಕ್ಷಿತ್ ಮೊದಲಾದವರು ಇದ್ದರು.
ವಿಶ್ವವಿದ್ಯಾನಿಲಯ ಕ್ಯಾಂಪಸ್ಸಿನಿಂದ ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸರಕಾರದ ಆದೇಶ ಬರಬೇಕಿದೆ
ಮನವಿ ಸ್ವೀಕರಿಸಿ ಮಾತನಾಡಿದ ರಿಜಿಸ್ಟ್ರಾರ್ ಇವೆಲ್ಯುವೇಷನ್ ಪ್ರೊ. ಬಿ.ನಾರಾಯಣ ಅವರು ಕಲೆದ ಬಾರಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಳಿಕ ಸರಕಾರಕ್ಕೆ ಈ ಕುರಿತ ದೂರು ಸಲ್ಲಿಸಲಾಗಿದೆ. ಅದು ಸದ್ಯ ಚರ್ಚೆಯಲ್ಲಿದೆ. ವಿಶ್ವವಿದ್ಯಾನಿಲಯದಿಂದ ಯಾವುದೇ ಪದ್ಧತಿಯನ್ನು ಜಾರಿ ಮಾಡಲಾಗಿಲ್ಲ. ಸರಕಾರದ ಗಮನಹರಿಸುವ ಕೆಲಸವನ್ನು ಮಾಡಿದ್ದೇವೆ. ಆದೇಶ ಇನ್ನು ಬರಬೇಕಿದೆ ಎಂದರು.

By Suddi9

Leave a Reply

Your email address will not be published. Required fields are marked *