ಸುದ್ದಿ9 ಬಂಟ್ವಾಳ : ತುಳು ಲಿಪಿ ಪರೀಕ್ಷೆಯಲ್ಲಿ 12 ಜನ ತೇರ್ಗಡೆಗೊಂಡಿದ್ದು ಹೀಗೆ ಹೆಚ್ಚು ಜನ ಶಿಕ್ಷಕರು ತುಳು ಲಿಪಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡರೆ ಹೆಚ್ಚು ಶಾಲೆಗಳಲ್ಲಿ ತುಳು ಲಿಪಿ ಕಲಿಕೆಯನ್ನು ಪ್ರಾರಂಭಿಸಬಹುದು ಹಾಗೂ ಬಂಟ್ವಾಳ ತಾಲೂಕಿನಲ್ಲಿ ತುಳು ಲಿಪಿ ಬಲ್ಲವರ 150 ಕ್ಕೂ ಮಿಕ್ಕಿದೆ , ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದರು .ಅವರು ದ.ಕ. ಹಿ.ಪ್ರಾ.ಶಾಲೆ ಶಂಭೂರಿನಲ್ಲಿ ” ತುಳುವೆ ” ತುಳು ಲಿಪಿ ಪತ್ರಿಕೆಯ 3ನೇ ಸಂಚಿಕೆಯ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು .
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳು ತುಳು ಲಿಪಿಯ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು , ಮುಂದಿನ ಕಲಿಕೆಗೆ ಈ ಪತ್ರಿಕೆ ಸಹಾಯವಾಗುವುದು ಎಂದು ನುಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು . ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಶಂಭೂರು , ತುಳು ಲಿಪಿ ಪತ್ರಿಕೆ ಸಂಪಾದಕ ಬಿ.ತಮ್ಮಯ್ಯ , ತುಳು ಲಿಪಿ ಶಿಕ್ಷಕರಾದ ದಿನಕರ ಹಾಗೂ ಸಂದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಮುಖ್ಯೋಪಾಧ್ಯಾಯಿನಿ ಲೀಲಾ ಸ್ವಾಗತಿಸಿದರು . ಶಂಕರನಾರಾಯಣ ರಾವ್ ವಂದಿಸಿ , ಕಾರ್ಯಕ್ರಮ ನಿರೂಪಿಸಿದರು.
DSCN0485

By Suddi9

Leave a Reply

Your email address will not be published. Required fields are marked *