ಸುದ್ದಿ9 ಬಂಟ್ವಾಳ : ಪುರಸಭೆಯಲ್ಲಿ 2013-14ನೇ ಸಾಲಿನ ಎಸ್.ಎಫ್.ಸಿ. ನಿಧಿಯಲ್ಲಿ ಶೇ.3ರ ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ಕೃತಕ ಸಾಧನಗಳನ್ನು 19 ಮಂದಿ ಫಲಾನುಭವಿಗಳಿಗೆ ವಿತರಿಸಲಾಯಿತು. 2014-15 ನೇ ಸಾಲಿನ ಎಸ್.ಎಫ್.ಸಿ. ನಿಧಿಯಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ , ತುರ್ತು ಚಿಕಿತ್ಸೆ ಬಗ್ಗೆ ಸಹಾಯ ಧನ ವಿತರಣೆ ಹಾಗೂ 2 ಮಂದಿಗೆ ಮನೆ ರಚನೆ ಬಗ್ಗೆ ಸಹಾಯಧನ ವಿತರಿಸಲಾಯಿತು . ಶೇ.22.75 ರ ಯೋಜನೆಯಡಿ 9ಮಂದಿಗೆ ಉಚಿತ ಗ್ಯಾಸ್ ವಿತರಣೆಯ ಮಂಜೂರಾತಿ ಆದೇಶ ಹಾಗೂ ಸೆ.22.75 ರ ಯೋಜನೆಯಡಿ 4 ಶೌಚಾಲಯ ರಚನೆ ಬಗ್ಗೆ ಮಂಜೂರಾತಿ ಆದೇಶದ ವಿತರಣೆಯನ್ನು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ನೆರವೇರಿಸಿದರು . ಪುರಸಭಾಧಿಕಾರಿ ಲೀನಾ ಬ್ರಿಟ್ಟೋ , ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ , ಜಗದೀಶ್ ಕುಂದರ್ , ಪ್ರಭಾ ಆರ್ ಸಾಲಿಯಾನ್ , ಮಹಮ್ಮದ್ ಶರೀಫ್ , ಜಗದೀಶ್ ಪೂಜಾರಿ , ನಾಮ ನಿರ್ದೇಶಿತ ಸದಸ್ಯರಾದ ಸಿದ್ದಿಕ್ ಗುಡ್ಡೆಯಂಗಡಿ , ನೋಬರ್ಟ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
DSC_0017

By Suddi9

Leave a Reply

Your email address will not be published. Required fields are marked *