ಸುದ್ದಿ9 ಬಂಟ್ವಾಳ: ನಾಳೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಕೆಲಸಕ್ಕೆ ಹಾಜರಾಗದಿದ್ದರೆ ಇಲಾಖೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಿ.ಡಿ.ಪಿ.ಒ ಅಧಿಕಾರಿಗೆ ಸೂಚನೆ ನೀಡಿದರು. ಯಶವಂತ ದೇರಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ.ನ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಅವರ ಬೇಡಿಕೆಯ ಬಗ್ಗೆ ಸೋಮವಾರ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರನ್ನು ಕರೆದು ವಿಶೇಷ ಸಭೆ ನಡೆಸುವ ಬಗ್ಗೆಯೂ ನಿರ್ಣಯಿಸಲಾಯಿತು.
ತುಳು ಭಾಷೆಯಲ್ಲಿ ತಾ.ಪಂ.ನ ಕಲಾಪಗಳನ್ನು ನಡೆಸಬೇಕು ಮತ್ತು ಅಮೂಲಕ ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಹೋರಾಟಕ್ಕೆ ನಾವು ಶಕ್ತಿ ತುಂಬಬೇಕು ಎಂದು ತಾ.ಪಂ. ಸದಸ್ಯ ಆನಂದ ಶಂಭೂರು ಎಂದು ಹೇಳಿದರು. ಅಬಳಿಕ ಅಧ್ಯಕ್ಷರು ಕೂಡಾ ತುಳುವಿನಲ್ಲಿ ಮಾತಾನಾಡಿದಾಗ ಕಾನೂನಿನ ಚೌಕಟ್ಟಿನಲ್ಲಿ ಈ ಕಲಾಪ ನಡೆಯುತ್ತಿರುವುದರಿಂದ ನಮಗೆ ಕಾನೂನಿನ ಅವಕಾಶ ಇದ್ದರೆ ಮಾತ್ರ ತುಳುವಿನಲ್ಲಿ ಕಲಾಪ ನಡೆಸುವ ಇಲ್ಲದಿದ್ದರೆ ಅದಕ್ಕೆ ನಾವೂ ಸಭೆಗೆ ಅಗೌರವ ನೀಡಿದಂತೆ ಅಗುತ್ತದೆ ಅಧ್ಯಕ್ಷರು ತುಳು ಭಾಷೆ ಬಳಸುವುದು ಸರಿಯಲ್ಲ ಮತ್ತು ನಾವೂ ಕಲಾಪ ನಡೆಸಲು ಅವಕಾಶವಿದೆಯೇ ಎಂದು ನಿರ್ಣಯವನ್ನು ಇಲಾಖೆಗೆ ಕಳುಹಿಸುವ ಎಂದು ಮಾದವ ಮಾವೆ ತಿಳಿಸಿದರು. ಸ್ವಲ್ಲ ಹೊತ್ತು ತುಳುವಿನ ವಿಚಾರ ಗೊಂದಲ ಕೂಡಾ ಏರ್ಪಟಿಸಿತ್ತು.


ಕಂದಾಯ ಇಲಾಖೆಯಲ್ಲಿ ಮಾಹಿತಿ ಗೊತ್ತಿಲ್ಲದ ಬೊಂಬೆಗಳನ್ನು ನಿಲ್ಲಿಸಲಾಗಿದೆ ಜನಪ್ರತಿನಿಧಿಗಳು ಹೋಗಿ ಕಂದಾಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರೆ ಅವರು ಗೊತ್ತಿಲ್ಲ ಎಂದು ಕೈ ತೊಳೆದುಕೊಳ್ಳುತ್ತಾರೆ. ತಾ.ಪಂ.ನ ಸಾಮಾನ್ಯ ಸಭೆಗೆ ಜವಬ್ದಾರಿಯಿರುವ ತಹಶೀಲ್ದಾರ್ ಬರದೆ ತಪ್ಪಿಸಿಕೊಳ್ಳುತ್ತಾರೆ, ಸುಳ್ಳು ಮಾಹಿತಿ ನೀಡಿ ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುವ ಅಧಿಕಾರಿಗಳನ್ನು ಸಭೆಗೆ ಕಳುಹಿಸಲಾಗುತ್ತಿದೆ ಎಂದು ದಿನೇಶ್ ಅಮ್ಟೂರು ಆರೋಪಿಸಿದರು. ಕಂದಾಯ ಇಲಾಖೆ ಎನ್ನುವುದು ಸುಳಿಗೆ ಇಲಾಖೆಯಾಗಿದೆ ದುಡ್ಡು ಬಿಟ್ಟರೆ ಇಲ್ಲಿ ಕೆಲಸ ಶೂನ್ಯ ದಲ್ಲಾಳಿಗಳ ಕೇಂದ್ರವಾಗಿದೆ ಎಂದು ಆರೋಪಗಳು ವ್ಯಕ್ತವಾಯಿತು. ಅಕ್ರಮ ಸಕ್ರಮದ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಜನರಿಂದ ಹಣ ಪಡೆಯುವದೇ ಇವರ ಕೆಲಸವಾಗಿದೆ ಎಮದು ದೂರಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾಸುರೇಶ್, ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ ತಾ.ಪಂ.ಕಾರ್ಯನಿರ್ವಹನಾಧಿಕಾರಿ ಸಿಪ್ರೀನ್ ಮಿರಾಂದ ಉಪಸ್ಥಿತರಿದ್ದರು.

