ಸುದ್ದಿ9 ಕೈಕಂಬ : ಸಮಾಜದಲ್ಲಿ ವಿಬಿನ್ನ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತಿದ್ದು ಅವುಗಳ ವಿರುದ್ದ ದೂರು ನೀಡುವ ಬಗ್ಗೆ ಯಾರಿಗೂ ಯಾವುದೇ ಹಿಂಜರಿಕೆ ಬೇಡ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇನ್ನಿತರ ಕುಟುಂಬಗಳಿಗೆ ಈ ಕುರಿತಾಗಿ ಕಾನೂನು ಜಾಗೃತಿ ಮೂಡಿಸುವ ಅಗತ್ಯ ವಿದೆ ಎಂದು ಬಜ್ಪೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್ ಕೆ.ಎಚ್ ಹೇಳಿದರು. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಂಡಾಲ ಸಮಾಜ(ರಿ)ಗುರುಪುರ-ಸುರತ್ಕಲ್ ಹೋಬಳಿ-ಗುರುಪುರ ಕೈಕಂಬ ಕಂದಾವರಪದವಿನಲ್ಲಿ ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇದರ ಮಾಸಿಕ ಸಭೆಯಲ್ಲಿ ಕಾನೂನು ಮಾಹಿತಿ ಶಿಬಿರ ಕಂದಾವರಪದವು ಅಂಬೇಡ್ಕರ್ ಭವನದಲ್ಲಿ ಫೆ.1 ರಂದು ಭಾನುವಾರ ನಡೆಯಿತು. ಅದ್ಯಪಾಡಿ ಮೋನಪ್ಪ ಪ್ರಸ್ತಾವನೆ ಬಾಷಣ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಆನಂದ ಕಾಜಿಲ ವಹಿಸಿದ್ದರು ಪೊಲೀಸ್ ಕಾನ್ಸ್ಟೇಬಲ್ ಶಶಿಧರ್, ಗ್ರಾ.ಪಂ ಸದಸ್ಯ ಹರೀಶ್.ಕೆ, ಸೀತಾರಾಮ್ ಸಭೆಯಲ್ಲಿ ಉಪಸ್ಥಿತರಿದ್ದರು. ನಾಗವೇಣಿ ಕಾಜಿಲ ಸ್ವಾಗತಿಸಿದರು, ಉಷಾ ಬಿ.ಎಸ್ ಕರ್ಕೇರ ಪ್ರಾರ್ಥಿಸಿದರು, ಬಿ.ಎಸ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ವಿಠಲ್ ಆಳ್ವ ವಂದಿಸಿದರು.

