ಸುದ್ದಿ9 ಬಜ್ಪೆ :ಬಸ್ಸು ಚಾಲಕ ಮತ್ತು ಮಾಲಕರ, ನಿರ್ವಾಹಕರ ಸಂಘ ಕಿನ್ನಿಗೋಳಿ ವಲಯ ಇವರ ನೇತ್ರತ್ವದಲ್ಲಿ ಕೆ.ಎಂ.ಸಿ, ಅಸ್ಪತ್ರೆ ಮಂಗಳೂರು ಹಾಗೂ ಶ್ರೀನಿವಾಸ್ ಅಸ್ಪತ್ರೆ ಮುಕ್ಕ ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರ ಕಿನ್ನಿಗೋಳಿಯ ಯುಗಪುರುಷ ಸಭಾಭವದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಟನೆಯನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು ನಂತರ ಮಾತನಾಡಿದ ಅವರು ಬಸ್ಸು ಚಾಲಕರೆಂದರೆ ಪ್ರಾಣ ತೆಗೆಯುವವರು ಎಂಬ ಕಲ್ಪನೆ ಜನರಲ್ಲಿ ಇರುವ ಈ ದಿನಗಳಲ್ಲಿ ರಕ್ತದಾನ ಶಿಬಿರವನ್ನು ಅಯೋಜಿಸಿ ಬಸ್ಸು ಚಾಲಕರು ಪ್ರಾಣ ಉಳಿಸುವವರು ಎಂಬದನ್ನು ತೋರಿಸಿ ಕೊಟ್ಟಿದ್ದೀರಿ, ಇಂತಹ ಕೆಲಸ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದರು, ಜಿಲ್ಲಾ ಪಂಚಾಯತ್ ಸದಸ್ಸ್ಯ ಈಶ್ವರ್ ಕಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕರಾದ ಸತ್ಯಜಿತ್ ಸುರತ್ಕಲ್, ಯುಗಪುರುಷದ ಸಂಪಾದಕರಾದ ಭುವನಾಭಿರಾಮ ಉಡುಪ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಗುರುರಾಜ್ ಪೂಜಾರಿ ಹಳೆಯಂಗಡಿ ಉಡುಪಿ ಜೆ.ಡಿ,ಯಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾದ ಗುಲಾಂ ಹುಸೇನ್, ಬರ್ಕೆ ಪ್ರೆಂಡ್ಸ್ ಮಂಗಳೂರಿನ ಗೌರವಾದ್ಯಕ್ಷರಾದ ಯಜ್ಞೇಶ್ವರ್ ಬರ್ಕೆ, ಯುವ ಉದ್ಯಮಿ ಅದರ್ಶ್ ಶೆಟ್ತಿ ಎಕ್ಕಾರು, ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಮೆನ್ನ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ್ ಕಿಲೆಂಜೂರು ಶ್ರೀನಿವಾಸ್ ಅಸ್ಪತ್ರೆ ಮುಕ್ಕ ಇದರ ವೈದ್ಯಾಧಿಕಾರಿ ಅಣಯ್ಯ ಕುಲಾಲ್, ಮಾರ್ಕೆಟಿಂಗ್ ವಿಭಾಗದ ಶ್ರೀರಾಂ ಕಾರಂತ್ ಮುಂತಾದವರು ಉಪಸ್ಥಿತರಿದ್ದರು. ಬಸ್ಸು ಚಾಲಕರ ನಿರ್ವಾಹಕರ ಸಂಘದ ಅಧ್ಯಕ್ಷರಾದ ಬಾಸ್ಕರ್ ಅಮೀನ್ ಉಲ್ಲಂಜೆ ಸ್ವಾಗತಿಸಿದರಿ, ದಿವಾಕರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

