ಬಂಟ್ವಾಳ :ತಾಲೂಕು ಪಾಂಗಲ್ಪಾಡಿ ಶ್ರೀ ವಿಷ್ಣಮೂರ್ತಿ ದೇವಸ್ಥಾನದ ಪುನರ್ನವೀಕರಣ ಕಾರ್ಯ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದೆ. ಈ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಸಹಾಯಧನವಾಗಿ 1 ಲ.ರೂ.ಮೊತ್ತದ ಚೆಕ್ ದೇವಸ್ಥಾನದಲ್ಲಿ ಬಂಟ್ವಾಳ ಯೋಜನಾಕಾರಿ ಸುನೀತಾ ನಾಯಕ್ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿಯ ಡಾ|ರಾಮಕೃಷ್ಣ ಎಸ್., ಕೆ.ಬೂಬ ಕುದ್ಕಂದೋಡಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರಾದ ಚಂದ್ರಯ್ಯ ಆಚಾರ್ಯ, ಪ್ರಶಾಂತ್ ಕೋಟ್ಯಾನ್, ಸಂತೋಷ್ ಶೆಟ್ಟಿ , ಯೋಜನೆ ಮೇಲ್ವಿಚಾರಕ ವಿನಾಯಕ ಗುನಗ, ಸೇವಾ ಪ್ರತಿನಿಧಿ ಮೋಹನದಾಸ ಗಟ್ಟಿ ಉಪಸ್ಥಿತರಿದ್ದರು.

