ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ನಂದಾವರ ನೇತ್ರಾವತಿ ನದಿ ತೀರದಲ್ಲಿ ಮರವೊಂದಕ್ಕೆ ಮೆಸ್ಕಾಂ ಅಧಿಕಾರಿಗಳು ಭಾರೀ ಉತ್ಸಾಹದಿಂದ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿರುವ ದೃಶ್ಯ.

ಬಂಟ್ವಾಳ:ಮಂಗಳೂರು ಸಹಾಯಕ ಕಮಿಷನರ್ ಡಾ. ಅಶೋಕ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಶನಿವಾರ ದಿಢೀರನೆ ನಡೆಸಿದ ಮಿಂಚಿನ ಕಾರ್ಯಚರಣೆಯಲ್ಲಿ ಬಂಟ್ವಾಳ ತಾಲ್ಲೂಕಿನ ಸಜೀಪಮೂಡ ಗ್ರಾಮದ ನಂದಾವರ ನೇತ್ರಾವತಿ ನದಿ ತೀರದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಪತ್ತೆ ಹಚ್ಚಿದ ಘಟನೆ ನಡೆದಿದೆ.
31btl-meter
ಕಾರ್ಯಚರಣೆಯಲ್ಲಿ 20 ಲೋಡ್ ಮರಳು ತುಂಬಿದ ಟಿಪ್ಪರ್, 11 ಮರಳು ಎತ್ತುವ ಬೋಟ್ಗಳು ಹೀಗೆ ಒಟ್ಟು ರೂ 11.30 ಲಕ್ಷ ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಭೂವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಲ್ಲಿ ನಿರಾತಂಕವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದು, ಕಾರ್ಯಚರಣೆ ವೇಳೆ ಮರಳುಗಾರಿಕೆಗೆ ಕಾರ್ಮಿಕರು ಹಾಕಿದ್ದ ಹಲವು ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸಲಾಗುತ್ತಿದ್ದಂತೆಯೇ ಕಾರ್ಮಿ ಕರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಬಹುತೇಕ ಹಿಂದಿ ಭಾಷೆ ಮಾತನಾಡುವ ಕಾರ್ಮಿಕರು ರಾತ್ರಿ-ಹಗಲೆನ್ನದೆ ನದಿಯಿಂದ ಮರಳು ಸಂಗ್ರಹಿಸುತ್ತಿದ್ದು, ಇವರನ್ನು ಮಂಗಳೂರಿನ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿ ರಾಜಕೀಯ ಪ್ರಭಾವದಿಂದ ದಂಧೆಗೆ ಬಳಸಿಕೊಂಡಿದ್ದಾನೆ. ರಾಜಕೀಯ ಪ್ರಭಾವದಿಂದ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನೆರವಿನಿಂದ ಈ ಅಕ್ರಮ ಮರಳು ಕೇರಳಕ್ಕೆ ರವಾನೆಯಾಗುತ್ತಿತ್ತು ಎಂಬ ಆರೋಪವೂ ಸ್ಥಳೀಯರಿಂದ ವ್ಯಕ್ತವಾಗಿದೆ.
ಮೆಸ್ಕಾಂ ಅನುಮತಿ
ವಿದ್ಯತ್ ಸಂಪರ್ಕ:
ಅಕ್ರಮ ಮರಳುಗಾರಿಕೆಗೆ ಅನುಕೂಲವಾಗುವಂತೆ ನದಿತೀರದ ಮರವೊಂದಕ್ಕೆ ಕಳೆದ 2014ನೇ ಡಿ. 17ರಿಂದ ಮೀಟರ್ ಅಳವಡಿಸಿ ಮೆಸ್ಕಾಂ ಅಧಿಕಾರಿಗಳು ಭಾರೀ ಉತ್ಸಾಹದಿಂದಲೇ ತಾತ್ಕಾಲಿಕ ನೆಪದಲ್ಲಿ ವಿದ್ಯುತ್ ಸಂಪರ್ಕ ನೀಡಿರುವುದು ಬೆಳಕಿಗೆ ಬಂದಿದೆ. (ಸಂಪರ್ಕ ಸಂಖ್ಯೆ ಜಿಎಂಎಲ್ಕೆಜೆ 153 ಎಂದು ನಮೂದಿಸಲಾಗಿದೆ)
ಬಂಟ್ವಾಳ ತಹಸೀಲ್ದಾರ್ ಮಹಮ್ಮದ್ ಇಸಾಕ್, ಭೂವಿಜ್ಞಾನಿ ಬಿ.ಕೆ.ಮೂರ್ತಿ , ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಉಮೇಶ್ ಭಟ್, ಕಂದಾಯ ನಿರೀಕ್ಷಕ ನಾರಾಯಾಣ ಪೂಜಾರಿ, ಗ್ರಾಮ ಲೆಕ್ಕಾಧಿಕಾರಿ ತೌಫೀಕ್, ಪ್ರದೀಪ್, ಎ.ಪಿ.ಭಟ್, ನವೀನ್, ಗ್ರಾಮ ಸಹಾಯಕ ಲಕ್ಷ್ಮಣ, ನವೀನ್, ಪುರುಷೋತ್ತಮ, ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *