ತನ್ನ ಮೈಮಾಟ ಹಾಗೂ ಅಭಿನಯ ಇವೆರಡರಿಂದಲೂ ಸಾಕಷ್ಟು ಪ್ರಸಿದ್ದಿ ಹೊಂದಿರುವ ನಟಿ ದೀಪಿಕಾ ಪಡುಕೋಣೆ ಇದೀಗ ಸಂಭಾವನೆ ವಿಷಯದಲ್ಲಿ ಅಚ್ಚರಿಮೂಡಿಸಿದ್ದು, ಅದರಲ್ಲಿಯೂ ಇಪ್ಪತ್ತು ನಿಮಿಷಗಳ ವಿಶೇಷ ಪಾತ್ರಕ್ಕೆ ಭಾರೀ ಡಿಮಾಂಡ್ ಮಾಡುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ.

deepi

ಹಲವು ಅವಕಾಶಗಳನ್ನು ಸಮಯದ ಅಭಾವದಿಂದ ಬಿಡುತ್ತಿರುವ ದೀಪಿಕಾ ಅವರನ್ನು ನಿರ್ಮಾಪಕರೊಬ್ಬರು ಭೇಟಿಯಾಗಿ ತಮ್ಮ ಸಿನಿಮಾದಲ್ಲಿ ಕೇಳಿಕೊಂಡಿದ್ದು, ಅದಕ್ಕೆ ಸಿನಿಮಾ ಕಥೆಯನ್ನೂ ಕೇಳಿದ ಈ ಹಾಲುಗಲ್ಲದ ಸುಂದರಿ ಒಪ್ಪಿದ್ದಾಳೆ. ಅದರಲ್ಲಿಯೂ ಸಲ್ಮಾನ್ ಖಾನ್ ನಟಿಸಲಿರುವ ಈ ಚಿತ್ರಕ್ಕೆ ಸ್ವಲ್ಪ ಹೆಚ್ಚಿನ ಆಸಕ್ತಿಯನ್ನೂ ತೋರಿದ್ದಾರೆ. ಹಾಗಾಗಿ ನಿರ್ಮಾಪರು ಸಂತಸಗೊಂಡು ಹಣಕಾಸಿನ ವ್ಯವಹಾರಕ್ಕೆ ಮುಂದಾಗಿದ್ದು ದೀಪಿಕಾ ಕೇಳಿದ ಸಂಭಾವನೆಗೆ ಬೆಚ್ಚಿಬಿದ್ದಿದ್ದಾರೆ.

ಈ ಸಿನಿಮಾದಲ್ಲಿ ದೀಪಿಕಾ ಇಪ್ಪತ್ತು ನಿಮಿಷಗಳ ಕಾಲ್ ತುಂಡುಡುಗೆ ಉಡಬೇಕಾಗಿದ್ದು ಇದೇ ಕಾರಣವನ್ನು ಮುಂದಿಟ್ಟುಕೊಂಡ ಈ ನಟಿ 30 ಕೋಟಿ ಕೇಳಿದ್ದಾಳೆ ಎನ್ನಲಾಗಿದೆ. ದೀಪಿಕಾರ ಈ ಬೆಲೆ ಕೇಳಿದ ನಿರ್ಮಾಪಕರು ಯಾವುದಕ್ಕೂ ತಿಳಿಸುತ್ತೇನೆ ಎಂದು ಮರಳಿ ಬಂದಿದ್ದು ಇನೂ ಆ ಕಡೆ ಮುಖ ಹಾಕಲಿಲ್ಲ ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ. ಆದರೆ ಇದಕ್ಕೆ ದೀಪಿಕಾ ಅವರ ಅಭಿಮಾನಿಗಳು ಈಕೆಯ ಸೌಂದರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾ ಎನ್ನುತ್ತಿದ್ದಾರಂತೆ.

By Suddi9

Leave a Reply

Your email address will not be published. Required fields are marked *