ಗಂಜಿಮಠ”ಅಳಿಕೆ ಪ್ರೆಂಡ್ಸ್” ಇದರ ನೂತನ ಅಧ್ಯಕ್ಷರಾದಂತಹ ಸುರೇಶ್ ಶೆಟ್ಟಿ ಅಳಿಕೆ ಇವರ ಮುಂದಾಳತ್ವದಲ್ಲಿ ಸ್ವಚ್ಛತಾ ಆಂದೋಲನ ಅಭಿಯಾನಕ್ಕೆ ಮಳಲಿ ಕ್ರಾಸ್, ಗಂಜಿಮಠ ಇದರ ಪರಿಸರದಲ್ಲಿ ಚಾಲನೆ ನೀಡಲಾಯಿತು.

ಸುಮಾರು 60 ಜನರಿಂದ ರಸ್ತೆ ಬದಿಗಳನ್ನು ಸಮತಟ್ಟುಗೊಳಿಸಿ ಕಸ-ಕಡ್ಡಿಗಳನ್ನು ಒಟ್ಟುಗೂಡಿಸಿ ಅದರ ವಿಲೇವಾರಿ ಮಾಡಿ ಸಮಯೋಚಿತ ಕಾರ್ಯಮಾಡಿ ಮಾನವಿಯತೆ ಮೆರೆದರು. ಇದರ ವಾರ್ಷಿಕೋತ್ಸವವು ಫೆ.21 ಮತ್ತು 22 ರಂದು ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವುದು.
