
ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕನರ್ಾಟಕದಿಂದ ಸ್ಪಧರ್ೆಗಿಳಿಯಲಿರುವ ಅಭ್ಯಥರ್ಿಗಳ ಮೊದಲ ಪಟ್ಟಿಯನ್ನುಬಿಜೆಪಿ ಪ್ರಕಟಿಸಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಅಭ್ಯಥರ್ಿಗಳ ಹೆಸರನ್ನು ಬಹಿರಂಗ ಪಡಿಸಿದೆ.
ನವದೆಹಲಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಚುನಾವಣಾ ಸಮಿತಿ ಸಭೆಯ ನಂತರ, ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಪ್ರಧಾನ ಕಾರ್ಯದಶರ್ಿ ಅನಂತ್ ಕುಮಾರ್ ಅವರು ಅಭ್ಯಥರ್ಿಗಳ ಪಟ್ಟಿಯನ್ನು ಓದಿ ಹೇಳಿದರು. ಉಳಿದ 8 ಕ್ಷೇತ್ರಗಳ ಅಭ್ಯಥರ್ಿಗಳ ಹೆಸರುಗಳನ್ನು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು
ತಿಳಿಸಿದರು. ಇದರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಳಿನ್ ಕುಮಾರ್ ಕಟೀಲ್ ಸ್ಥಾನ ಪಡೆದಿರುವುದು ವಿಶೇಷ.
ಶಿವಮೊಗ್ಗದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ಬೆಂಗಳೂರು ಉತ್ತರಕ್ಕೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸ್ಪಧರ್ಿಸಲಿದ್ದಾರೆ. ಕಳೆದ ಬಾರಿಯ ಸಂಸದ ಡಿಬಿ ಚಂದ್ರೇಗೌಡ ಅವರನ್ನು ಕಡೆಗಣಿಸಲಾಗಿದೆ.
ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಕನರ್ಾಟಕದಲ್ಲಿ ಮತದಾನ ನಡೆಯಲಿದ್ದು, ಮೇ 16ರಂದು ಫಲಿತಾಂಶ ಹೊರಬೀಳಲಿದೆ.
20 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿರುವ ಅಭ್ಯಥರ್ಿಗಳ ಹೆಸರುಗಳು
ಬೆಂಗಳೂರು ಉತ್ತರ – ಡಿವಿ ಸದಾನಂದ ಗೌಡ
ಬೆಂಗಳೂರು ದಕ್ಷಿಣ : ಅನಂತ್ ಕುಮಾರ್
ಬೆಂಗಳೂರು ಸೆಂಟ್ರಲ್ – ಪಿಸಿ ಮೋಹನ್
ಬೆಂಗಳೂರು ಗ್ರಾಮಾಂತರ – ಮುನಿರಾಜು ಗೌಡ
ಚಿತ್ರದುರ್ಗ – ಜನಾರ್ದನ ಸ್ವಾಮಿ
ಗುಲಬರ್ಗ – ರೇವೂ ನಾಯಕ್ ಬೆಳಮಗಿ
ಹಾವೇರಿ – ಶಿವಕುಮಾರ್ ಉದಾಸಿ
ಧಾರವಾಡ – ಪ್ರಹ್ಲಾದ್ ಜೋಶಿ
ದಾವಣಗೆರೆ – ಜಿಎಂ ಸಿದ್ದೇಶ್
ಚಿಕ್ಕೋಡಿ – ರಮೇಶ್ ಕತ್ತಿ
ಬಿಜಾಪುರ – ರಮೇಶ್ ಜಿಗಜಿಣಗಿ
ರಾಯಚೂರು – ಶಿವನಗೌಡ ನಾಯಕ್
ಬೆಳಗಾವಿ – ಸುರೇಶ್ ಅಂಗಡಿ
ಕೊಪ್ಪಳ್ಳ – ಸಂಗಣ್ಣ ಕರಡಿ
ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ
ಬಾಗಲಕೋಟೆ – ಗದ್ದಿಗೌಡರ್
ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್
ಶಿವಮೊಗ್ಗ – ಯಡಿಯೂರಪ್ಪ
ಚಾಮರಾಜನಗರ – ಎಆರ್ ಕೃಷ್ಣಮೂತರ್ಿ
ಚಿಕ್ಕಬಳ್ಳಾಪುರ- ಬಚ್ಚೇಗೌಡ
ಚುನಾವಣಾ ಸಮಿತಿ ಸಭೆಯಲ್ಲಿ ಹಿರಿಯ ನಾಯಕರಾದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ, ಎಲ್ ಕೆ ಅಡ್ವಾಣಿ ಅವರು ಹಾಜರಿದ್ದರು.
