ಉತ್ತರ ಪ್ರದೇಶ: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಆಡಲು ತೆರಳಿದ್ದ ಉತ್ತರ ಪ್ರದೇಶದ ಹಾಕಿ ಆಟಗಾರ್ತಿ ಪಂದ್ಯಾವಳಿ ಬಳಿಕ ರೈಲಿನಲ್ಲಿ ವಾಪಾಸ್ ಬರುವಾಗ ನಾಪತ್ತೆಯಾಗಿದ್ದು, ಇದೀಗ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಕಾರಣ ಪ್ರಕರಣ ಸುಖಾಂತ್ಯಗೊಂಡಿದೆ.
ಕರೀಷ್ಮಾ ಸೋನ್ಕರ್ ನಾಪತ್ತೆಯಾಗಿದ್ದ ಹಾಕಿ ಆಟಗಾರ್ತಿಯಾಗಿದ್ದು, ಈಕೆಯ ಪೋಷಕರು ಕೋಚ್ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಕಾಣೆಯಾಗಿರುವುದಾಗಿ ಆರೋಪಿಸಿದ್ದರೆ, ಕೋಚ್ ಮಾತ್ರ ಪೈಜಾಬಾದ್ ವರೆಗೆ ಆಟಗಾರರನ್ನು ಸುರಕ್ಷಿತವಾಗಿ ಕರೆ ತರುವ ಜವಾಬ್ದಾರಿ ತಮಗೆ ಇದ್ದು, ಫೈಜಾಬಾದ್ ರೈಲು ನಿಲ್ದಾಣಕ್ಕೆ ಆಕೆಯನ್ನು ಕರೆದುಕೊಂಡು ಹೋಗಲು ಕರೀಷ್ಮಾ ಪೋಷಕರು ಬಾರದ ಕಾರಣ ಈ ನಡೆದಿದೆ ಎಂದು ಹೇಳಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕರೀಷ್ಮಾ ಸೋನ್ಕರ್ ಆಕೆಯ ಪ್ರಿಯಕರ ಶಿವಮ್ ಕಾಟಿಯಾರ್ ಎಂಬಾತನ ಜೊತೆಯಿರುವುದನ್ನು ಪತ್ತೆ ಹಚ್ಚಿದ್ದು, ಕರೀಷ್ಮಾ, ಪ್ರಾಪ್ತ ವಯಸ್ಕಳಾಗಿರುವ ತಾನು ಸ್ವ ಇಚ್ಚೆಯಿಂದಲೇ ಶಿವಮ್ ಜೊತೆಗೆ ತೆರಳಿರುವುದಾಗಿ ಹೇಳಿಕೆ ನೀಡಿದ್ದಾಳೆ. ಅಲ್ಲದೇ ತಾನು ಶಿವಮ್ ಕಾಟಿಯಾರ್ ಜೊತೆಯೇ ಜೀವನ ಸಾಗಿಸಲು ಬಯಸಿದ್ದು ಮನೆಗೆ ಹಿಂದಿರುಗುವುದಿಲ್ಲವೆಂದು ಹೇಳಿದ್ದಾಳೆ.
